ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ:
ತಲೆ ತಂಡ ನಿರ್ದೇಶಕ ಪ್ರವೀಣ್ ಕೃಪಾಕರ್ ರವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಖಾಸಗೀ ಹೋಟೆಲ್ ನಲ್ಲಿ,
ಡಿ ಎಫ್ ಡಿ ಸ್ಟೂಡೆಂಟ್ಸ್ ಮತ್ತು ಜೀವಿತ ಕ್ರಿಯೇಷನ್ ವತಿಯಿಂದ ಪ್ರವೀಣ್ ಕೃಪಾಕರ್ ರವರಿಗೆ ಹಾಗೂ ಸುತ್ತೂರು ಮಠದ ಕಿರುಚಿತ್ರ ಮಾಡಿದ ಕರೀಂ ರವರಿಗೆ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಪ್ರವೀಣ್ ಕೃಪಾಕರ್ ಮಾತನಾಡಿ ಇಂದಿನ ಹೆಸರಾಂತ ನಟರು ಮೈಸೂರಿನವರು.ಡಿ ಎಫ್ ಡಿ ವಿದ್ಯಾರ್ಥಿಗಳು ನನಗೆ ಅಭಿನಂದಿಸಿದ್ದು ಖುಷಿ ತಂದಿದೆ.ತಲೆ ತಂಡ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಈ ಪ್ರಶಸ್ತಿಯನ್ನು ಮೈಸೂರಿಗೆ ಅರ್ಪಿಸುತ್ತೇನೆ. ಚಲನಚಿತ್ರ 16 ಚಿತ್ರಗಳ ಪೈಕಿ ತಲೆದಂಡ ಚಿತ್ರ ಒಂದು.50 % ಪರಿಸರವನ್ನು ಮನುಷ್ಯ ಹಾಳುಮಾಡಿದ್ದಾನೆ .ಅದನ್ನು ಉಳಿಸಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ಅರೆ ವಿಕಲಚೇತನ ಪಾತ್ರದಲ್ಲಿ ದಿ. ನಟ ಸಂಚಾರಿ ವಿಜಯ್ ನಟಿಸಿದರು.ಈ ಎಲ್ಲಾ ಪ್ರಶಸ್ತಿಗಳು ಅಭಿನಂದನೆಗಳು ಸಂಚಾರಿ ವಿಜಯ್ ಗೆ ಸೇರಬೇಕು ಎಂದು ನೆನೆದರು.
ಕಾರ್ಯಕ್ರಮದಲ್ಲಿ ಡಿ ಎಫ್ ಡಿ ಉಪನ್ಯಾಸಕ
ಮಂಜುನಾಥ್,ಮೊದಲ ಸಿನಿಮಾದ ನಿರ್ದೇಶಕ ಪುರುಷೋತ್ತಮ್,
ಸಿದ್ದೇಗೌಡ,ದಯಾ ,ಕೃಷ್ಣಮೂರ್ತಿ, ಪಾರ್ಥಸಾರಥಿ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ: ನಂದಿನಿ ಮೈಸೂರು.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



