“ಮೋದಿ ಯವರ ಹುಟ್ಟು ಹಬ್ಬಕ್ಕೆ ಬಂದಿರುವ ಗಿಫ್ಟ್”

ಮೋದಿ ಯವರ ಹುಟ್ಟು ಹಬ್ಬಕ್ಕೆ ಬಂದಿರುವ ಗಿಫ್ಟ್ ಗಳನ್ನು ​ಹಾಗೂ ವಿವಿಧ ಪರಿಕರ ಹರಾಜು ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗಿದೆ.

ಹೌದು ಅವರಿಗೆ ಬಂದ ಉಡುಗೊರೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿದೆ. ಈ ಬಾರಿಯೂ ಹೆಚ್ಚು ಮೌಲ್ಯದ ವಸ್ತುಗಳನ್ನು ಇ-ಹರಾಜು ಹಾಕಲಾಗುತ್ತಿದೆ. ಈ ಸಲ ಒಟ್ಟು 1200 ಗಿಫ್ಟ್​​​ಗಳು ಹರಾಜಿನಲ್ಲಿದ್ದು, ಇವುಗಳನ್ನು ನೀವೂ ಖರೀದಿ ಮಾಡಬಹುದಾಗಿದೆ.

ಇದಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಇ-ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂದಿನ ಎರಡು ವಾರಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಅಕ್ಟೋಬರ್​​ 2ರಂದು ಮುಕ್ತಾಯಗೊಳ್ಳಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು https://pmmementos.gov.in ವೆಬ್​​ಸೈಟ್​​ನಲ್ಲಿ ನಮ್ಮ ಹೆಸರು ನೋಂದಣಿ ಮಾಡಿಕೊಳ್ಳುವುದು ಅತಿ ಅವಶ್ಯಕ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ. ಕಿಶನ್​ ರೆಡ್ಡಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *