ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಗದ ವತಿಯಿಂದ ಇಂದು ಕನ್ನಡ ರಾಜ್ಯೊತ್ಸವ ಆಚರಿಸಲಾಯಿತು
ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಗದ ವತಿಯಿಂದ ಇಂದು ಕನ್ನಡ ರಾಜ್ಯೊತ್ಸವವನ್ನು ಮೈಸೂರಿನ ಜಯನಗರದ ನೇಗಿಲಯೋಗಿ ಮರುಳೇಶ್ವರ ಭವನದಲ್ಲಿ ಆಚರಿಸಲಾಯಿತು. ಸದಸ್ಯರಿಗೆ ಕನ್ನಡ ನಾಡು ನುಡಿಯ ಬಗೆಗೆ ಜಾಗೃತಿ ಮೂಡಿಸಲಾಯಿತು .
ಸಮಾರಂಭದ ಪ್ರಯುಕ್ತ ಸಾಂಪ್ರದಾಯಿಕ ಆಟಗಳಾದ ಚೌಕಾಬಾರ, ಲಗೋರಿ ಕಲ್ಲುಗಳಿಗೆ ಗುರಿ ಇಟ್ಟು ಬೀಳಿಸುವುದು ಜೋಡಿಸುವುದು, ಪಗಡೆ ,ಅಳಿಗುಳಿ ಮನೆ ಮುಂತಾದ ಮನರಂಜನಾ ಸ್ಪರ್ದೆಗಳನ್ನು ಏರ್ಪಾಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶೋಭ ರಮೇಶ್ ರವರು ವಹಿಸಿದ್ದರು.ಸಂಘದ ಇತರ ಪದಾಧಿಕಾರಿಗಳು ಹಾಜರಿದ್ದರು. ಸದಸ್ಯರುಗಳು ಕನ್ನಡ ನಾಡಿನ ಸಂಕೇತವಾದ ಹಳದಿ ಮತ್ತು ಕೆಂಪು ಬಣ್ಣದ ಉಡುಗೆ ಧರಿಸಿ ಬಂದು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ವರದಿ :ನಂದಿನಿ ಮೈಸೂರು


