ಮೈಸೂರು ಪೌರಕಾರ್ಮಿಕರು ನಿಧನರಾಗಿದ್ದು, ಇವರ ಕುಟುಂಬಕ್ಕೆ ಅನುಕಂಪ ದಡಿಯಲ್ಲಿ ಕೆಲಸ ನೀಡಿ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಗುತ್ತಿಗೆ ಪದ್ಧತಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ನಂತರ ಸರ್ಕಾರವು 2018ರಲ್ಲಿ ಈ ಪೌರಕಾರ್ಮಿಕರೆಗೆ ನೇರನೇಮಕಾತಿ ಹಾಗೂ ನೇರಪಾವತಿಯಲ್ಲಿ ನೇಮಕ ಮಾಡಿತ್ತು. ಈ ನೇರಪಾವತಿಯಡಿಯಲ್ಲಿ “ಕೆಲಸ ಮಾಡುತ್ತಿರುವ ಪೌರಕಾರ್ಮಿಕರಲ್ಲಿ, ಸುಮಾರು 68 ಪೌರಕಾರ್ಮಿಕರು ನಿಧನರಾಗಿದ್ದು, ಇವರ ಕುಟುಂಬಕ್ಕೆ ಸರ್ಕಾರದಿಂದಾಗಲೀ, ಪಾಲಿಕೆ ವತಿಯಿಂದಾಗಲೀ ಯಾವುದೇ ರೀತಿಯ ಸಹಾಯವಾಗದೆ ಬೀದಿಗೆ ಬಂದು ಜೀವನ ಸಾಗಿಸಲು ತುಂಬ ಕಷ್ಟಕರವಾಗಿರುತ್ತದೆ. ಏಕೆಂದರೆ, ಈ ಕುಟುಂಬಗಳ ಈ ನೇರಪಾವತಿ ಕೆಲಸವನ್ನು ನಂಬಿ ಜೀವನ ಮಾಡುತ್ತಿದ್ದು, ಆದ್ದರಿಂದ ತಾವುಗಳು ದಯಮಾಡಿ ಈ ನೇರಪಾವತಿಯಲ್ಲಿ ಕೆಲಸ ಮಾಡಿ ನಿಧನ ಹೊಂದಿರುವ ಪೌರಕಾರ್ಮಿಕರ ಕುಟುಂಬಗಳು ಜೀವನ ಸಾಗಿಸಲು ಅವರ ಕುಟುಂಬಕ್ಕೆ ಅನುಕಂಪದ ಆಧಾರದಡಿಯಲ್ಲಿ ಒಂದು ಕೆಲಸ ನೀಡಿ: ಜೀವನ ಸಾಗಿಸಲು ದಾರಿ ಮಾಡಿಕೊಡಬೇಕೆಂದು ಈ ಮೂಲಕ ಮನವಿ.
ವರದಿ: ನಂದಿನಿ ಮೈಸೂರು


