ಮೈಸೂರು: ನವೆಂಬರ್ 6- ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭಕ್ಕೆ ಮೈಸೂರು ಕಾಂಗ್ರೆಸ್ ಸಿದ್ಧತೆ.

ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ 06.11.2022 ರಂದು ಬೆಂಗಳೂರಿನಲ್ಲಿ ನೆಡೆಯಲಿರುವ ಅಭಿನಂದನಾ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿತ್ತು .
ಜಿಲ್ಲಾಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್ ಮಾತನಾಡಿ ಅಖಿಲ ಭಾರತ ಕಾಂಗ್ರೆಸಗೆ ಮಲ್ಲಿಕಾರ್ಜುನ ಖರ್ಗೆಯವರು ಅಭೂತಪೂರ್ವ ಜಯ ಸಾಧಿಸಿದ್ದಾರೆ. ಇವರು
ಹುಟ್ಟು ಕಾಂಗ್ರೆಸ್ಸಿಗರಾಗಿ ಪಕ್ಷಕ್ಕೆ ಅಪಾರ ನಿಷ್ಠೆಯನ್ನು ತೋರಿರುವುದು ನಮಗೆ ಮಾರ್ಗದರ್ಶನವಾಗಿದೆ. ಕಾರ್ಮಿಕ ನಾಯಕರಾಗಿ, ಗದಗ್ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ಶಾಸಕರಾಗಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ .ಸಂವಿಧಾನದ 371 J ವಿಧಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ಉತ್ತರ ಕರ್ನಾಟಕದ ಜನರ ಪಾಲಿಗೆ ಮೆಚ್ಚಿನ ನಾಯಕರಾಗಿದ್ದಾರೆ .ಇಂತಹ ಮಹಾನ್ ಸಾಧಕರು ಎ.ಐ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಕರ್ನಾಟಕದ ಪಾಲಿಗೆ ಹರ್ಷದ ವಿಚಾರ. ಇವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಬಹಳ ದೊಡ್ಡ ಮಟ್ಟದ ಗೌರವ ಸಮರ್ಪಣೆ ಮಾಡಲು ನಿರ್ಧಾರ ಮಾಡಲಾಗಿದೆ. ಅದರ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ಎಲ್ಲರೂ ಒಮ್ಮತದ ತೀರ್ಮಾನ
ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು .ಮುಂದುವರೆದು ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಲು ಪ್ರತಿ ಬ್ಲಾಕ್ ಹಾಗೂ ತಾಲ್ಲೂಕಿನಿಂದ ಎಲ್ಲ ಕಾರ್ಯಕರ್ತರನ್ನು ಕರೆತರಬೇಕು ಎಂದು ಮನವಿ ಮಾಡಿದರು .ನಂತರದಲ್ಲಿ ಮಾತನಾಡಿ ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರಾದ ಖರ್ಗೆಯವನ್ನು ಮೈಸೂರಿಗೆ ಕರೆತರಬೇಕು ಎಂದು ನಾಯಕರು ತೀರ್ಮಾನಸಿದ್ದಾರೆ ಎಂದು ಹೇಳಿದರು . ಇದೇ ತಿಂಗಳ 6 ನೇ ತಾರಿಕ್ಕೂ ಎಲ್ಲರೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಮನವಿ ಮಾಡಿದರು.
ನಂತರದಲ್ಲಿ ಮಾತನಾಡಿದ ಮಾಜಿ ಶಾಸಕಾದರ ವಾಸು ಅವರು ಖರ್ಗೆಯವರೊಂದಿಗಿನ ತಮ್ಮ ಹಳೆಯ ಒಡನಾಟವನ್ನು ಹೇಳುತ್ತಾ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎಂದರೆ ರೋಮಾಂಚನ , ಅಂತಹ ಹಿನ್ನೆಲೆಯಿಂದ ಬಂದ ಖರ್ಗೆಯವರನ್ನು ಸಂಸದರಾಗಿ ,ಶಾಸರಾಗಿ ಸಚಿವಾರಗಿ ನೋಡಿದ್ದೇನೆ .ಬಡತನ ಮತ್ತು ಹೋರಾಟದ ಹಿನ್ನೆಲೆಯಿಂದ ಬಂದು ವಕೀಲರಾಗಿ ಬಹಳ ಅನುಭವ ಅವರಿಗಿದೆ. ಸೂಕ್ಷ್ಮಮತಿಯಾದ ಖರ್ಗೆಯವರಲ್ಲಿ
ದ್ವೇಷದ ಭಾವನೆ ಇಲ್ಲ ಎಂದು ಹೇಳಿದರು .
ಮುಂದುವರೆದು ಅವರಿಗೆ ಅಪಾರ ನೆನಪಿನ ಶಕ್ತಿ ಇದೆ ಮತ್ತು ಸಮಯ ಪ್ರಜ್ಞೆ ಇದೆ .ಇದನ್ನು ಎಲ್ಲರೂ ಅವರಿಂದ ಕಲಿಯಬೇಕು ಎಂದು ಹೇಳಿದರು .ಖರ್ಗೆಯವರು ರಾಷ್ಟ್ರೀಯ ಅಧ್ಯಕ್ಷರಾಗಿರುವುದು ಎಲ್ಲರಿಗೂ ತಂತಸ ತಂದಿದೆ ,ಲೋಕ ಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಮಹಾ ಅನುಭವಿ ಅವರು ಎಂದು ಹೇಳಿ ಜೀವನದ ಹಲವಾರು ಏಳು ಬಿಳುಗಳನ್ನು ಗೆದ್ದು ಇಂದು ಗದ್ದುಗೆ ಏರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ಆದಕಾರಣ ಇಂತಹ ಶ್ರಮ ಜೀವಿಯ ಅಭಿನಂದನಾ ಸಮಾರಂಭಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಬರಬೇಕು ಅದು ನಮ್ಮ ನೈತಿಕ ಕರ್ಥವ್ಯ ಎಂದು ಹೇಳಿ ಮುಂದಿನ ಚುನಾವಣೆಯಲ್ಲಿ ನಮ್ಮ ಕೆಲಸವನ್ನು ಪ್ರಭಲವಾಗಿ ಕೆಲಸ ಮಾಡಬೇಕೆಂದು ಹೇಳಿದರು .
ಸಭೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ ಬಿಜೆ ವಿಜಯಕುಮಾರ್, ವಿಧಾನಪರಿಷತ್ ಸದಸ್ಯರಾದ ತಿಮ್ಮಯ್ಯ, ಮಾಜಿ ಮೇಯರ್ಗಳಾದ ಮೋದಮಣಿ, ಚಿಕ್ಕಣ್ಣ, ನಾರಾಯಣ್, ಬಿ.ಕೆ. ಪ್ರಕಾಶ್, ಶ್ರೀಮತಿ ಪುಷ್ಪಲತಾ ಜಗನ್ನಾಥ್,
ನಗರ ಪಾಲಿಕೆ ಮಾಜಿ ಸದಸ್ಯರಾದ ನಾಗಭೂಷಣ್, ಪ್ರಶಾಂತ್, ಪ್ರದೀಪ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರ ಮೌಳಿ, ಕಾಂಗ್ರೆಸ್ ಮುಖಂಡರಾದ ಕೆ ಮರಿಗೌಡ, ಕೆ ಹರೀಶ್ ಗೌಡ, ಕೆಪಿಸಿಸಿ ಕಾರ್ಯದರ್ಶಿಗಳಾದ ಶಿವನಾಗಪ್ಪ, ಲೋಕೇಶ್ ರಾವ್, ಜೇಸುದಾಸ್, ಭಾಸ್ಕರ್, ಶ್ರೀನಾಥ್ ಬಾಬು, ಕಾಂಗ್ರೆಸ್ ಪದಾಧಿಕಾರಿಗಳಾದ ಎಡತಲೆ ಮಂಜುನಾಥ್, ಎನ್. ಶಿವಪ್ರಸಾದ್, ಹುಣಸೂರು ಬಸವಣ್ಣ, ಈಶ್ವರ್ ಚಕ್ಕಡಿ, ಸುನಂದ ಕುಮಾರ್, ಗಿರೀಶ್, ಅಶೋಕ್, ಸತೀಶ್ ಕುಮಾರ್, ಗುರುಸ್ವಾಮಿ, ಮಂಜು, ಲಕ್ಷ್ಮಣ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ತಲಕಾಡು ಮಂಜುನಾಥ್, ಅರುಣ್ ಕುಮಾರ್ ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

