ಮೈಸೂರು: ಮಕ್ಕಳ ಹಕ್ಕುಗಳ ಸಂಸತ್ 22 ಜಿಲ್ಲಾ ಮಟ್ಟದ ಮಕ್ಕಳ ಸಮಲೋಚನೆ ಕಾರ್ಯಗಾರ.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್.ಎಲ್ ಎಚ್.ಪಿ. ಮೈಸೂರು) ಯುನೆಸೆಫ್ ಮತ್ತು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ದ ಸಂಯುಕ್ತ ಆಶ್ರಯದಲ್ಲಿ
” ಮಕ್ಕಳ ಹಕ್ಕುಗಳ ಸಂಸತ್’ 22 ಜಿಲ್ಲಾ ಮಟ್ಟದ ಮಕ್ಕಳ ಸಮಲೋಚನೆ” ಕಾರ್ಯಗಾರವನ್ನು ನಡೆಸಲಾಯಿತು.
ಕಾರ್ಯಕ್ರಮದ ಕುರಿತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಿಲ್ಲೆಯ ಮಕ್ಕಳ ಸ್ಥಿತಿಗತಿಗಳು ಮಕ್ಕಳ ಬದುಕು,ಆರೋಗ್ಯ, ರಕ್ಷಣೆ, ಶಿಕ್ಷಣ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಮತ್ತು ಮಕ್ಕಳ ಅವಶ್ಯಕತೆಗಳನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಆಗ್ರಹಿಸಲು ಈ ಒಂದು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ.ಮಕ್ಕಳ ಪ್ರಮುಖ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು,ಅವಕಾಶ ಮತ್ತು ವಿಕಾಸಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕು ಈ ಹಕ್ಕುಗಳನ್ನು ಮಕ್ಕಳು ತಾವು ಅನುಭವಿಸಿ ತಮಗೆ ಇರುವಂತಹ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಈ ಒಂದು ದಿನ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಡಿ ಉದಯಕುಮಾರ್ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿಗಳು ಉಪ ನಿರ್ದೇಶಕರ ಕಚೇರಿ ಮೈಸೂರು ಮಾತನಾಡುತ್ತಾ ಇಂದಿನ ಮಕ್ಕಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕೂ ಮೀರಿದ ಹಲವಾರು ಸಮಸ್ಯೆಗಳು ಮಕ್ಕಳಿಗಿದ್ದು ಅದರ ಕುರಿತು ಇಂದು ತಾವು ಚರ್ಚಿಸಬೇಕಿದೆ. ಅಲ್ಲದೆ ಇದರ ಕುರಿತು ಮುಂದೆ ನಡೆಯುವ ಮಕ್ಕಳ ಸಂಸತ್ತಿನಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ಸಮಸ್ಯೆಗಳ ಕುರಿತು ಚರ್ಚಿಸಬೇಕಿದೆ ತಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಮಧುಸೂದನ್ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೈಸೂರು ನಗರ, ಮಾತಾಡುತ್ತಾ ತಾಂತ್ರಿಕತೆಯಿಂದ ಯೋಚನಾ ಶಕ್ತಿ ಕುಂಠಿತವಾಗುತ್ತಿದೆ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥವನ್ನು ಮಾಡದೆ ಯೋಜನೆಗಳನ್ನು ಹಾಕಿಕೊಂಡು ತಾವುಗಳು ಓದಿದಲ್ಲಿ ನಿಜವಾಗಿಯೂ ಯಶಸ್ಸನ್ನು ಕಾಣಲಿಕ್ಕೆ ಸಾಧ್ಯ ಹಾಗಾಗಿ ಯೋಚನೆ ಮಾಡುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಈ ನಿಟ್ಟಿನಲ್ಲಿ ತಮ್ಮ ಹಕ್ಕುಗಳ ಕುರಿತು ಚರ್ಚಿಸಿ ಎಂದು ತಿಳಿಸಿದರು.
ಜೆ.ಶೇಖರ್ ಪೊಲೀಸ್ ಇನ್ಸ್ಪೆಕ್ಟರ್, ನರ ಹತ್ಯ ಹಾಗೂ ಸೌಹಾರ್ದ ದಳ ವಿಭಾಗ ನಗರ ಅಪರಾಧ ವಿಭಾಗ ಮೈಸೂರು ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಮಕ್ಕಳ ವಿಶೇಷ ಪೊಲೀಸ್ ಘಟಕ ಅವರ ಪರವಾಗಿ, ಮಾತನಾಡುತ್ತಾ ಒಬ್ಬ ಬಡ ಮಗು ಪಡೆಯುತ್ತಿರುವ ಶಿಕ್ಷಣದ ಮಟ್ಟಕ್ಕೂ ಉಳ್ಳವರು ತೆಗೆದುಕೊಳ್ಳುವ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವಿದ್ದು ಶಿಕ್ಷಣದ ಹಕ್ಕು ಸಮಾನವಾಗಿರಬೇಕು ಸ್ಪರ್ಧಾತ್ಮಕ ಶಿಕ್ಷಣದಲ್ಲಿ ಮಕ್ಕಳು ಹಿಂದೆ ಬೀಳುತ್ತಿದ್ದು ಇದರ ಕುರಿತು ಗ್ರಾಮೀಣ ಪ್ರದೇಶದಲ್ಲಿ ಇನ್ನು ಹಕ್ಕುಗಳು ಬೆಳೆಯಬೇಕಿದೆ ಎಂದು ತಿಳಿಸಿದರು ಒಂದು ಮಗು ಬೆಳವಣಿಗೆ ಹೊಂದಬೇಕಾದರೆ ಶಾಲೆಯ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಪ್ರಸನ್ನ ಕುಮಾರ್ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಮಕ್ಕಳ ವಿಶೇಷ ಪೊಲೀಸ್ ಘಟಕ ಮೈಸೂರು ಮಾತನಾಡುತ್ತಾ ಮಕ್ಕಳ ಮಾತನಾಡೋಣಗಳನ್ನು ಆಲಿಸುವುದು ಒಂದು ಅವರ ಹಕ್ಕು ಅದನ್ನು ನಾವು ಗೌರವಿಸದಂತೆ ಮಕ್ಕಳ ದಿನಾಚರಣೆ ಪಂಚಾಯತ್ ರಾಜ್ ಯೋಜನೆಯಲ್ಲಿ ಅಳವಡಿಸಿದ್ದು ಪ್ರತಿಭಾ ಕಾರಂಜಿ ಭಾಗವಹಿಸುವ ಹಕ್ಕುವನ್ನು ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳು ಉತ್ತಮವಾದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೊ.ಜೋಸ್ ವಿ.ಕೆ ಕಾರ್ಯದರ್ಶಿಗಳು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಮೈಸೂರು ಮಾತನಾಡಿ ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ 31 ವರ್ಷಗಳ ಹಿಂದೆಯೇ ಬಂದಿದ್ದು ಇಂದಿಗೂ ಮಕ್ಕಳಿಗೆ ಹಕ್ಕುಗಳು ಸಿಗದಿರುವುದು ವಿಪರ್ಯಾಸವೇ ಸರಿ. ಆರೋಗ್ಯ ಶಿಕ್ಷಣ ರಕ್ಷಣೆ ಭಾಗವಹಿಸುವಿಕೆ ಸ್ವಚ್ಛತೆ ಇವೆಲ್ಲವೂ ಮಕ್ಕಳ ಅವಿಭಾಜ್ಯ ಅಂಗ ಹಾಗೂ ಕೇವಲ ಭಾಗವಹಿಸುವುದು ಎಂದರೆ ಪ್ರಶ್ನೆಗಳನ್ನು ಕೇಳುವುದಲ್ಲ ಮಾಹಿತಿಗಳನ್ನು ಪಡೆದು ಆನಂತರ ಮಕ್ಕಳು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದರು.
ಮಕ್ಕಳ ಪ್ರತಿನಿಧಿಯಾಗಿ ಕುಮಾರಿ ಸುಶ್ಮಿತಾ ಅವರು, ವಿವಿಧ ತಾಲೂಕುಗಳಿಂದ ಆಗಮಿಸಿದಂತಹ ಮಕ್ಕಳು, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

