ಮೈಸೂರು: ಗೋಪಾಲನೆ, ಗೋದಾನ ಮಹತ್ವದ್ದು: ವಿದ್ವಾನ್ ಕೃಷ್ಣಮೂರ್ತಿ.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಪಾಲನೆಗೆ ಹಾಗೂ ಗೋದಾನಕ್ಕೆ ಭಾರಿ ಮಹತ್ವವಿದೆ. ಗೋವಿನ ಪಾಲನೆ ಮೂಲಕ ಇಡೀ ಕುಟುಂಬ ಜೀವನ ನಿರ್ವಹಣೆ ಮಾಡಲು ಸಾಧ್ಯವಿದೆ’ ಎಂದು ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಹೇಳಿದರು.
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ
ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ
ಲೋಕ ಕಲ್ಯಾಣಾರ್ಥ ಗ್ರಹಣ ಶಾಂತಿ ಹೋಮ ಹಾಗೂ ಮುಜರಾಯಿ ಇಲಾಖೆಯ ಆದೇಶದ ಮೇರೆಗೆ ದೀಪಾವಳಿ ಹಬ್ಬದ ಹಿನ್ನೆಲೆ ಗೋಮಾತೆ ಪೂಜೆ ಸಲ್ಲಿಸಲಾಯಿತು.
ಕೇತುಗ್ರಸ್ತ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ವಿಶೇಷ ಶಾಂತಿ ಹಮ್ಮಿಕೊಳ್ಳಲಾಗಿತ್ತು ಗ್ರಹಣ ಹೋಮಕ್ಕೆ ಸುಮಾರು 200 ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿ ಕೊಂಡಿದ್ದರು .ಕೆಲವು ರಾಶಿ ನಕ್ಷತ್ರದವರಿಗೆ ಗ್ರಹದಿಂದ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಸಾಮೂಹಿಕ ಶಾಂತಿಹೋಮ ಹಮ್ಮಿಕೊಳ್ಳಲಾಗಿತ್ತು ,ಮಧ್ಯಾಹ್ನ 1ಗಂಟೆಗೆ ವೇಳೆಗೆ ಹೋಮದ ಪೂರ್ಣಾಹುತಿ ನೆರವೇರಿಸಲಾಯಿತು .ಅನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ನಂತರ
ಮಾತನಾಡಿದರು. ‘ಗೋವಿನ ಹಾಲಿನಲ್ಲಿ ಹಲವು ಪೋಷಕಾಂಶಗಳಿದ್ದು, ಮಕ್ಕಳ ಬೆಳವಣಿಗೆಗೆ ಪೂರಕ ವಾಗಿವೆ. ಹೈನುಗಾರಿಕೆ ಮೂಲಕ ರೈತರು ಉಪ ಆದಾಯ ಕಂಡುಕೊಂಡು, ಆರ್ಥಿಕ ಸ್ವಾವಲಂಬನೆ ಗಳಿಸಬಹುದು. ಪ್ರತಿ ಮನೆಯಲ್ಲೂ ಗೋವನ್ನು ಸಾಕಬೇಕು ಎಂದರು.
ಇದೇ ಸಂದರ್ಭದಲ್ಲಿ
ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ,ವಿದ್ವಾನ್ ವೇಣುಗೋಪಾಲ್ ,ತಿರುಮಲ,ಹರೀಶ್ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

