“ಧಾರಾಕಾರ ಭಾರಿ ಮಳೆಗೆ ನೂರಾರು ಎಕರೆ ಫಸಲು ಮುಳುಗಡೆ”

ಮೈಸೂರು: ಧಾರಾಕಾರ ಭಾರಿ ಮಳೆಗೆ ನೂರಾರು ಎಕರೆ ಫಸಲು ಮುಳುಗಡೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಭಾರಿ ಮಳೆಗೆ ನೂರಾರು ಎಕರೆ ಫಸಲು ಮುಳುಗಡೆ ಅಪಾರ ಪ್ರಮಾಣದ ನಷ್ಟ ಪರಿಹಾರಕ್ಕೆ ಒತ್ತಾಯ.

ತಾಂಡವಪುರ ಅಕ್ಟೋಬರ್ 22 ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಭಾರಿ ಮಳೆಗೆ ದಡದಹಳ್ಳಿ ಕಟ್ಟೆ ಹೊಡೆದಿದ್ದು, ಎಣ್ಣೆ ಹೊಳೆ ವ್ಯಾಪ್ತಿಯ ನೂರಾರು ಎಕರೆಯಲ್ಲಿ ಬೆಳೆದಿದ್ದ, ಭಕ್ತ ಬಾಳೆ ತೆಂಗು ಕಬ್ಬು ಸೇರಿದಂತೆ ಮುಂತಾದ ಬೆಳೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ಸರ್ಕಾರ ಕೂಡಲೇ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಒತ್ತಾಯಿಸಿದ್ದಾರೆ.

ಎಣ್ಣೆಹೊಳೆ ವ್ಯಾಪ್ತಿಯ ನಂಜನಗೂಡು ತಾಲೂಕು ಹಾಗೂ ಮೈಸೂರು ತಾಲೂಕು ವ್ಯಾಪ್ತಿಗೆ ಬರುವ ಸೋಮೇಶ್ವರಪುರ ಕೂಡನಹಳ್ಳಿ ಕಡಕೋಳ ಬಸಳ್ಳಿ ಹುಂಡಿ ನಂಜನಗೂಡು ತಾಲೂಕಿನ ಹೆಬ್ಯ ಅಡಕನಹಳ್ಳಿ ಹುಂಡಿ ಇಮ್ಮವು ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಈ ನಾಲೆಯಲ್ಲಿ ವರುಣನ ಆರ್ಭಟಕ್ಕೆ ಈ ನಾಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದುಬರುತ್ತಿರುವ ಪರಿಣಾಮ ನೂರಾರು ಎಕರೆಯ ಫಸಲು ನಷ್ಟವಾಗಿದ್ದು, ರೈತರ ಬದುಕು ಬೀದಿಗೆ ಬಂದಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲಿಸಿ ನಷ್ಟ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಅಧಿಕಾರಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಡಕನಹಳ್ಳಿ ಹುಂಡಿ ಬಿ ಶಿವಣ್ಣ ತಾಂಡವಪುರ ಮಧು ರವರು ಹಾಗೂ ರೈತರು ಒತ್ತಾಯಿಸಿದ್ದಾರೆ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *