“ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಡಕೋಳ ದ ಎಣ್ಣೆಹೊಳೆ ಸೇತುವೆ ರಸ್ತೆ ಮುಳುಗಡೆ ಸೇತುವೆ ಎತ್ತರಕ್ಕೆ ಶ್ರೀಕಂಠ ತೊಂಡೆ ಗೌಡ ಒತ್ತಾಯ”

ಮೈಸೂರು : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕಡಕೋಳ ದ ಎಣ್ಣೆಹೊಳೆ ಸೇತುವೆ ರಸ್ತೆ ಮುಳುಗಡೆ ಸೇತುವೆ ಎತ್ತರಕ್ಕೆ ಶ್ರೀಕಂಠ ತೊಂಡೆ ಗೌಡ ಒತ್ತಾಯ.

ತಾಂಡವಪುರ ಅಕ್ಟೋಬರ್ 15 ಮೈಸೂರು ತಾಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕಡಕೋಳ ಗ್ರಾಮದಿಂದ ಸ್ಮಶಾನಕ್ಕೆ ಹೋಗುವ ಎಣ್ಣವಳೆ ಸೇತುವೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದ್ದು, ಸೇತುವೆಯನ್ನು ಐದರಿಂದ ಎಂಟು ಅಡಿಗಳಷ್ಟು ಎತ್ತರ ಮಾಡಬೇಕು ಎಂದು ಕ್ಷೇತ್ರದ ಶಾಸಕರಾದ ಜಿಟಿ ದೇವೇಗೌಡರಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆ ಗೌಡರವರು ಒತ್ತಾಯಿಸಿದರು. ಅವರು ಇಂದು ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆ ಸೇತುವೆಯನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ದಡದಹಳ್ಳಿ ಕಟ್ಟೆ ತುಂಬಿ ಹೆಚ್ಚುವರಿಯಾಗಿ ಬರುತ್ತಿರುವುದರಿಂದ ನಿಮ್ಮ ಗ್ರಾಮದಿಂದ ಮೈಸೂರು ನಂಜನಗೂಡು ಊಟಿ ರಸ್ತೆಗೆ ಹಾಗೂ ಗ್ರಾಮದ ಸ್ಮಶಾನಕ್ಕೆ ಸಂತ ಮಾಡಕ್ಕೆ ಸಂಪರ್ಕ ಕಲ್ಪಿಸುವ ಈ ಎಣ್ಣವಳೆ ಸೇತುವೆ ಮುಳುಗಡೆ ಗೊಂಡಿದ್ದು, ತುಂಬಾ ತೊಂದರೆಯಾಗಿದೆ.

ಕ್ಷೇತ್ರ ಶಾಸಕರಾದ ಜಿಟಿ ದೇವೇಗೌಡರು ಸ್ಥಳ ಪರಿಶೀಲಿಸಿ ಈ ರಸ್ತೆಯ ಸೇತುವೆಯನ್ನು ಎತ್ತರ ಮಾಡಿದರೆ. ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದ್ದು, ಆದಷ್ಟು ಬೇಗನೆ ಶಾಸಕರು ಇತ್ತಕಡೆ ಗಮನಿಸಬೇಕೆಂದು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಕಂಠ ತೊಂಡೆ ಗೌಡ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *