ಮೈಸೂರು: ಪೌರಕರ್ಮಿಕರಿಗೆ ಆಟೋಟ ಸ್ಪರ್ಧೆ.

ವಾರ್ಡ್ 55 ಮನೆ ಮನೆ ದಸರಾ ಕಾರ್ಯಕ್ರಮವನ್ನು ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು.
ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಮನೆ ಮನೆ ದಸರಾ ಕಾರ್ಯಕ್ರಮವನ್ನು ವಾರ್ಡ್ ನಂ 55ರಲ್ಲಿ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು.
ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಇಂದು ಶುಕ್ರವಾರ ಪೌರಕರ್ಮಿಕರಿಗೆ ಆಟೋಟ ಸ್ಪರ್ಧೆ” ಆಯೋಜಿಸಿಲಾಗಿತ್ತು.
ಈ ಕಾರ್ಯಕ್ರಮವು 55ನೇ ವಾರ್ಡಿನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರದದ ತಗಡೂರು ರಾಮಚಂದ್ರರಾವ್ ಉದ್ಯಾನವನ ಬಳಿ ಕಾರ್ಯಕ್ರಮ ನಡೆಯಿತು, ಇಂದು ಪೌರಕರ್ಮಿಕರಿಗೆ ಮ್ಯೂಸಿಕಲ್ ಚೇರ್, ಲೆಮನ್ & ಸ್ಪೂನ್, ಬಕೆಟ್ ನಲ್ಲಿ ಬಾಲ್ ಹಾಕುವುದು, ಮಡಿಕೆ ಹೊಡೆಯುವುದು ಸ್ಪರ್ಧೆ ಗಳನ್ನು ಅಡಿಸಲಾಯಿತು.
ಮ ವಿ ರಾಮಪ್ರಸಾದ್ ಅವರ ಮಾತನಾಡುತ್ತಾ ದಿನ ನಿತ್ಯ ಸ್ವಚ್ಛತೆಯಲ್ಲಿ ತೊಡಗಿರುವ ಪೌರ ಕಾರ್ಮಿಕರಿಗೆ ಈ ಕಾರ್ಯಕ್ರಮ ಮಾಡಿರುವುದು ಬಹಳ ಸಂತೋಷ ತಂದಿದೆ ಎಂದರು, ಅಲ್ಲದೆ ಮನೆ ಮನೆ ದಸರಾ ಎಲ್ಲರ ಮನ ಮುಟ್ಟುವಂತೆ ನಡೆಯಬೇಕು ಎಂದು ಹೇಳಿ, ಸಾರ್ವಜನಿಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದು ತಿಳಿಸಿ ಈ ಬಾರಿ ನಾಡಹಬ್ಬ ದಸರಾವನ್ನು ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್, ಮುಖಂಡರಾದ ಸಿ ಸಂದೀಪ್, ವಿ ಮಂಜುನಾಥ್, ಮಂಜುಳ, ಧರ್ಮೇಂದ್ರ, ಲಲಿತಾಂಬ, ದೇವೇಂದ್ರ ಸ್ವಾಮಿ, ಮಧು, ಬಸವರಾಜು, ರವಿ, ಶೇಖರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

