“ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಭೂಮಿ ದೊರಕಿಸಿಕೊಟ್ಟರೆ ಮೈಸೂರು ಜಿಲ್ಲೆ ಒಕ್ಕೂಟದಿಂದ ಅನುದಾನ”

ಮೈಸೂರು: ಅಡಕನಹಳ್ಳಿ ಹುಂಡಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಭೂಮಿ ದೊರಕಿಸಿಕೊಟ್ಟರೆ ಮೈಸೂರು ಜಿಲ್ಲೆ ಒಕ್ಕೂಟದಿಂದ ಅನುದಾನ ಕೊಡಿಸುವುದಾಗಿ ಒಕ್ಕೂಟದ ಆರ್ ಶೃತಿ ಬರವಸೆ.

ತಾಂಡವಪುರ ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಕನಹಳ್ಳಿ ಹುಂಡಿ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ 21 22 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಸಾಕಮ್ಮನವರು ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶೃತಿಯವರು ನಿಮ್ಮ ಗ್ರಾಮದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲ ಆದ್ದರಿಂದ ನಿಮ್ಮದೇ ಆದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಗ್ರಾಮದಲ್ಲಿ ಭೂಮಿ ಗುರುತಿಸಿ ಕೊಟ್ಟರೆ ಸರ್ಕಾರದಿಂದ ಹಾಗೂ ಒಕ್ಕೂಟದಿಂದ ಅನುದಾನ ತಂದು ಕಟ್ಟಡ ನಿರ್ಮಿಸಿಕೊಳ್ಳಬಹುದು .

ಎಂದು ತಿಳಿಸಿದರಲ್ಲದೆ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮವಾಗಿ ನಡೆಯುತ್ತಿದ್ದು ಮಹಿಳೆಯರು ಸ್ವಾವಲಂಬಿ ಬದುಕು ಜೀವನ ನಡೆಸಲು ಹೈನುಗಾರಿಕೆ ಸಹಕಾರಿಯಾಗಿದ್ದು, ಇಲ್ಲಿ ಹೆಚ್ಚಿನ ರೀತಿಯಲ್ಲಿ ಮಹಿಳೆಯರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ತಾವು ಆರ್ಥಿಕವಾಗಿ ಮುಂದೆ ಬರುವ ಜೊತೆಗೆ ಸಂಘದ ಅಭಿವೃದ್ಧಿಗೆ ಕೈಜೋಡಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸಾಕಮ್ಮ ಉಪಾಧ್ಯಕ್ಷರಾದ ಚಂದ್ರಮ್ಮ ಸಂಘದ ಕಾರ್ಯದರ್ಶಿ ಆರ್ ಶೀಲಾ ಹಾಲು ಪರೀಕ್ಷಕ ಕುಮಾರಿ ಸದಸ್ಯರಾದ ಮಹದೇವಮ್ಮ ರತ್ನಮ್ಮ ಸಿದ್ದ ಮಣಿ ಮಹಾದೇವಮ್ಮ ಕಲ್ಪನಾ ಮಾದೇವಮ್ಮ ರತ್ನಮ್ಮ ಅನಿತಾ ಮಹಾದೇವಮ್ಮ ಸೇರಿದಂತೆ ಚಂದದ ಮಹಿಳಾ ಹಾಲು ಉತ್ಪಾದಕರು ಹಾಜರಿದ್ದರು ಇದೇ ವೇಳೆ ಸಂಘದ ಸದಸ್ಯರಿಗೆ ಸಿಹಿ ವಿತರಿಸಿ ಶೀಲಾ ಹಾಗೂ ಶ್ರುತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *