ಮೈಸೂರು : ವನ್ ವೇ ಅವಾಂತರ.

ವನ್ ವೇ ಇರುವ ರಸ್ತೆಯಲ್ಲಿ ಯಾಕೆ ಬೈಕ್ ಚಲಾಯಿಸಿಕೊಂಡು ಬರುತ್ತೀರಾ ಎಂದು ಪ್ರಶ್ನಿಸಿದ ವೈದ್ಯರೋರ್ವರನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ಕೈದು ವಿದ್ಯಾರ್ಥಿಗಳು ಥಳಿಸಿದ ಘಟನೆ ಮೈಸೂರು ಬೋಗಾದಿ ಜಂಕ್ಷನ್ ಬಳಿ ನಡೆದಿದೆ.
ಮೂರ್ನಾಲ್ಕು ಹುಡುಗರಿದ್ದ ಗುಂಪೊಂದು ಬೋಗಾದಿ ಜಂಕ್ಷನ್ ಬಳಿ ವನ್ ವೇ ಯಲ್ಲಿ ಬೈಕನ್ನು ಅಡ್ಡಾದಿಡ್ಡಿ ಓಡಿಸಿಕೊಂಡು ಬರುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರು ವನ್ ವೇ ರಸ್ತೆಯಲ್ಲಿ ಯಾಕೆ ಬೈಕ್ ಓಡಿಸಿಕೊಂಡು ಬರುತ್ತೀರಾ ನಮಗೆ ಹೋಗುವವರಿಗೆ ತೊಂದರೆಯಾಗಲ್ಲವಾ ಎಂದು ಪ್ರಶ್ನಿಸಿದ್ದನ್ನೇ ನೆಪ ಮಾಡಿಕೊಂಡ ವಿದ್ಯಾರ್ಥಿಗಳು ಅವರ ಕಾರನ್ನು ಅಡ್ಡಗಟ್ಟಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿರುವುದು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು, ಇದರಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸದಸ್ಯರೋರ್ವರ ಪುತ್ರನೂ ಇದ್ದ ಎನ್ನಲಾಗಿದೆ. ಈ ಕುರಿತು ಸರಸ್ವತಿಪುರಂ ಠಾಣೆ ಪೊಲೀಸರಿಗೆ ವೈದ್ಯರು ದೂರು ನೀಡಲು ತೆರಳಿದ್ದಾರೆ ಎನ್ನಲಾಗಿದೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

