ಮೈಸೂರು ಮೃಗಾಲಯದಲ್ಲಿ ನೂತನ ಅಥಿತಿಗಳ ವೀಕ್ಷಣೆಗೆ ಮುಕ್ತ

ಮೈಸೂರು:ಮೈಸೂರು ಮೃಗಾಲಯದಲ್ಲಿ ನೂತನ ಅಥಿತಿಗಳ ವೀಕ್ಷಣೆಗೆ ಮುಕ್ತ.

ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಇಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ರವರು
ಯುರೋಪಿಯನ್ ಇಂದ ತರಿಸಿರುವ ವಲ್ಲಭಿ (ಕಾಂಗರೂ ಜಾತಿಯ) ಮೂರು ಪ್ರಾಣಿಗಳು ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಯುರೋಪಿಯನ್ ಇಂದ ತರಿಸಿರುವ ವಲ್ಲಭಿ (ಕಾಂಗರೂ ಜಾತಿಯ) ಮೂರು ಪ್ರಾಣಿಗಳು ಒಂದು ಗಂಡು, ಎರಡು ಹೆಣ್ಣು,ಕಳೆದ ಒಂದೂವರೆ ತಿಂಗಳಿಂದ ಬಂದಿದ್ದು ವಾತಾವರಣಕ್ಕೆ ಅನುಗುಣವಾಗಿ ಇರಲು ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿತ್ತು ಇಂದು
ಪ್ರವಾಸಿಗರಿಗೆ ನೋಡಲು ಅನುವು ಮಾಡಿಕೊಡಲಾಗಿದೆ ಮೈಸೂರು ಮೃಗಾಲಯಕ್ಕೆ ಹೊಸ ಹೊಸ ಪ್ರಾಣಿಗಳು ಬರುತ್ತಿದೆ ಮೃಗಾಲಯದ ಹುಲಿ ಕೂಡ ಮೂರು ಮರಿಗಳಿಗೆ ಜನ್ಮ ನೀಡಿದೆ ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರವಾಸಿಗರಿಗೆ ನೋಡಲು ವ್ಯವಸ್ಥೆ ಮಾಡಲಾಗುವುದು.

ಕೋವಿಡ್ ನಂತರ ಮೈಸೂರು ಮೃಗಾಲಯಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರೆ ದಸರಾ ಮಹೋತ್ಸವ ಒಂದು ತಿಂಗಳು ಇರುವುದರಿಂದ ಮೃಗಾಲಯದಲ್ಲಿ ಯಾವುದೇ ತೊಂದರೆ ಇಲ್ಲ ದಸರಾ ಉದ್ಘಾಟಕರು ಇನ್ನೂ ನಿರ್ಧಾರ ಆಗಿಲ್ಲ
ಮುಖ್ಯಮಂತ್ರಿಗಳು ನಿರ್ಣಯ ಮಾಡಲಿದ್ದಾರೆ.

ಸಕ್ರಿಯ ರಾಜಕಾರಣಿಗಳನ್ನು ದಸರಾ ಮಹೋತ್ಸವ ಉದ್ಘಾಟನೆ ಗೆ ಕರೆಯುವ ಸಂಪ್ರದಾಯ ಇಲ್ಲ ಎನ್ನುವ ಮೂಲಕ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡರಿಂದ ದಸರಾ ಉದ್ಘಾಟನೆಯ ವಿಷಯವನ್ನು ತಳ್ಳಿ ಹಾಕಿದರು.

ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮೃಗಾಲಯದ ನಿರ್ದೇಶಕ ಕುಲಕರ್ಣಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *