ಮುರುಘಾ ಶ್ರೀಗಳಿಂದ ಅಪ್ರಾಪ್ತೆ ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪ ಶ್ರೀಗಳ ವಿರುದ್ದ ಮೈಸೂರಿನಲ್ಲಿ ಎಫ್ ಐ ಆರ್

ಮೈಸೂರು: ಮುರುಘಾ ಶ್ರೀಗಳಿಂದ ಅಪ್ರಾಪ್ತೆ ಮಕ್ಕಳಿಗೆ ಲೈಂಗಿಕ ಕಿರುಕುಳ ಆರೋಪ ಶ್ರೀಗಳ ವಿರುದ್ದ ಮೈಸೂರಿನಲ್ಲಿ ಎಫ್ ಐ ಆರ್.

ಚಿತ್ರದುರ್ಗದ ಮುರುಘ ಮಠದ ಶ್ರೀಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಪ್ರಾಪ್ತ ಬಾಲಕಿಯರು ಆರೋಪಿಸಿ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರಿನ ಒಡನಾಡಿ ಸಂಸ್ಥೆಗೆ ನೆನ್ನೇ ಆಗಮಿಸಿದ ಇಬ್ಬರು ಹೆಣ್ಣು ಮಕ್ಕಳು ಮುರುಘ ಶ್ರೀ ಸ್ವಾಮೀಜಿಗೆ ಹಣ್ಣು ತೆಗೆದುಕೊಂಡು ಹೋಗಿ ಕೊಡುವಂತೆ ಮಹಿಳಾ ವಾರ್ಡನ್ ಹೇಳುತ್ತಿದ್ದರು.
ಹಣ್ಣು ತೆಗೆದುಕೊಂಡು ಹೋದಾಗ ನಮಗೆ ಮತ್ತು ಬರುವಂತೆ ಮಾಡಿ ಸ್ವಾಮೀಜಿ ನಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.
ನಮಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದರು.
ಒಡನಾಡಿ ಸಂಸ್ಥೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ವಿಚಾರ ತಿಳಿಸಿದ್ದಾರೆ.
ಸಮಿತಿಯವರು ಈ ಬಗ್ಗೆ ಮಕ್ಕಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಸಮಿತಿಯ ರಕ್ಷಣಾಧಿಕಾರಿ ಅವರು ನೀಡಿರುವ ದೂರಿನ ಮೇರೆಗೆ ಮೈಸೂರಿನ ನಜರ್ ಬಾದ್ ಪೋಲಿಸ್ ಸ್ಟೇಷನ್ ನಲ್ಲಿ ಫೋಸ್ಕೊ ಕಾಯ್ದೆಯಡಿ ಮುರುಘಾ ಶ್ರೀ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ವರದಿ : ನಂದಿನಿ ಮೈಸೂರು

Leave a Reply

Your email address will not be published. Required fields are marked *