ಕುಂಸಿ ಜಿಲ್ಲಾ ಪಂಚಾಯತಿ ಸಿರಿಗೆರೆ, ಆಯನೂರು, ಕೋಹಳ್ಳಿ, ತಮ್ಮಡಿಹಳ್ಳಿ, ಮಂಡಘಟ್ಟ, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ – ಶಾಸಕರಾದ ಕೆ.ಬಿ.ಅಶೋಕ ನಾಯ್ಕ

ಕುಂಸಿ ಜಿಲ್ಲಾ ಪಂಚಾಯತಿ ಸಿರಿಗೆರೆ, ಆಯನೂರು, ಕೋಹಳ್ಳಿ, ತಮ್ಮಡಿಹಳ್ಳಿ, ಮಂಡಘಟ್ಟ, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ – ಶಾಸಕರಾದ ಕೆ.ಬಿ.ಅಶೋಕ ನಾಯ್ಕ

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರ ತಮ್ಮ ಕ್ಷೇತ್ರದ ಪ್ರವಾಸವನ್ನು ಕುಂಸಿ ಜಿಲ್ಲಾ ಪಂಚಾಯತಿ ಸಿರಿಗೆರೆ, ಆಯನೂರು, ಕೋಹಳ್ಳಿ, ತಮ್ಮಡಿಹಳ್ಳಿ, ಮಂಡಘಟ್ಟ, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಮಲೇಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರವಾಸವನ್ನು ಆರಂಭಿಸಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಊರುಗಳಿಗು ಪ್ರವಾಸ ನಡೆಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದಾಗಿ ತಿಳಿಸಿದರು. ಅಲ್ಲದೇ ಕೇಂದ್ರ ಮತ್ತು ರಾಜ್ಯ ಭಾರತೀಯ ಜನತಾ ಪಕ್ಷ ಸರ್ಕಾರದ ಜನಪರ ಯೋಜನೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ತಮ್ಮ ಕ್ಷೇತ್ರದ ಪ್ರವಾಸವನ್ನು ಕುಂಸಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಲೇಶಂಕರ ದೇವಸ್ಥಾನದಿಂದ ಆರಂಭಿಸಿದ್ದು. ಪೂಜಾ ಸಮಯದಲ್ಲಿ ಶ್ರೀ ಮಲೇಶಂಕರ ಸ್ವಾಮಿಯು ವರ ಪ್ರಸಾದ ವನ್ನು ನೀಡಿದ್ದು. ಮುಂದಿನ ವಿಧಾನಸಭಾ ಚುನಾವಣೆಯ ಗೆಲುವಿನ ಸಂದೇಶ ನೀಡಿತು.

ಈ ಸಂದರ್ಭದಲ್ಲಿ ಬಿ.ಜಿ.ಪಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾಉಪಾಧ್ಯಕ್ಷರಾದ ಪದ್ಮಿನಿ, ಸುರೇಶ್ ಸಿಂಗನಹಳ್ಳಿ, ತಮ್ಮಡಿಹಳ್ಳಿ ನಾಗರಾಜ್, ಸುಧಾಕರ್, ಅರುಣ್, ಲಕ್ಷ್ಮೀಕಾಂತ್ ಶೆಟ್ರು, ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *