“ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆ”

ಮಂಡ್ಯ: ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆ.

ಕೆ‌.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದ್ದು ಸಂಗಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸಲಾಗಿದೆ.

ಗಂಗಾಸ್ನಾನ ಮಾಡಲು ಸ್ನಾನ ಘಟ್ಟ ನಿರ್ಮಾಣ, ಸಂಗಮ ಸ್ಥಾನಕ್ಕೆ ತೆರಳು ಹೊಸ ಕಾಂಕ್ರೀಟ್ ರಸ್ತೆ, ಯಾಗ ಮಂಟಪ, ಸಾವಿರಾ ವಾಹನಗಳ ನಿಲ್ಲಿಸಲು ನಿಲ್ದಾಣ , ನೂತನ ದೇವಾಲಯ, ವೇಘದ ಬೋಟಿಂಗ್, ಹೆಲಿಪ್ಯಾಡ್, ಸೇರಿದಂತೆ ಪ್ರತಿದಿನ ಲಕ್ಷಾಂತರ ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಯನ್ನು ಮೂರು ಕಡೆಗಳಲ್ಲಿ ಮಾಡಲಾಗಿದೆ. ಗಂಗಾರತಿ ಮಂಟಪ ಎಲ್ಲರ ಗಮನ ಸೆಳೆಯುತ್ತಿದೆ.
ಈಗಾಗಲೇ ಸಾವಿರಾರು ಭಕ್ತಾಧಿಗಳು ಸಿದ್ದತೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಲೇಂದೆ ಕುಟುಂಬದ ಸಮೇತ ಬರುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಯೇ ಇತಿಹಾಸ ನಿರ್ಮಾಣ ಮಾಡುವಂತಹ ಮಹಾಕುಂಭ ಮೇಳ ನಡೆಸಲು ಸಚಿವರಾದ ನಾರಾಯಣಗೌಡರು, ಗೋಪಾಲಯ್ಯನವರು ಪಣತೊಟ್ಟು ನಿಂತಿರುವಂತೆ ಹಗಲು ರಾತ್ರಿ ಕೆಲಸವಮಾಡುತ್ತಿದ್ದಾರೆ. ಇವರೊಂದಿಗೆ ಸರ್ಕಾರ ಹಾಗೂ ಜಿಲ್ಲಾಡಳಿತವೂ ಕುಂಭ ಮೇಳದ ಯಶಸ್ವಿಯಾಗಿ ನಡೆಸಲು ಸಿದ್ದತೆ ಮಾಡಿಕೊಂಡಿದೆ.

ಕುಂಭ ಮೇಳಕ್ಕೆ ರಾಷ್ಟೀಯ ಮಟ್ಟದ ನಾಯಕರು ಹಾಗೂ ವಿಶ್ವ ಮಟ್ಟದ ಗುರುಹಿರಿಯರು ಬರುವುದರಿಂದ ಲಕ್ಷಾಂತರ ಭಕ್ತಾಧಿಗಳು ಮತ್ತು ಆಬಿಮಾನಿಗಳು ಬರುವುದರಿಂದ ಈ ಸಾಲಿನಲ್ಲಿ ನಡೆಯುವ ಕುಂಭ ಮೇಳೆ ರಾಜ್ಯದಲ್ಲಿ ಇತಿಹಾಸ ನಿರ್ಮಿಸುತ್ತದೆ ಎಂದು ಭಕ್ತಾಧಿಗಳು ತಿಳಿಸುತ್ತಿದ್ದಾರೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *