“ನಿರ್ಮಾಣ ಹಂತ ಮನೆಯ ನೀರಿನ ಸಂಪಿನಲ್ಲಿ ಅನುಮಾನಾಸ್ಪದವಾಗಿ ಬಾಲಕಿಯ ಶವ ಪತ್ತೆ”

  • ಮಂಡ್ಯ: ನಿರ್ಮಾಣ ಹಂತ ಮನೆಯ ನೀರಿನ ಸಂಪಿನಲ್ಲಿ ಅನುಮಾನಾಸ್ಪದವಾಗಿ ಬಾಲಕಿಯ ಶವ ಪತ್ತೆ.

ಮಂಡ್ಯದ ಮಳವಳ್ಳಿ ಪಟ್ಟಣದಲ್ಲಿ ಘಟನೆ. ಮಳವಳ್ಳಿ ಪಟ್ಟಣದ ಅಶ್ವಿನಿ, ಸುರೇಶ್ ದಂಪತಿಯ ಪುತ್ರಿ ಮೃತ ಬಾಲಕಿ.. ಎಂದಿನಂತೆ ಮನೆ ಪಾಠಕ್ಕೆ ಹೋಗಿದ್ದ ಬಾಲಕಿ.

ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಮನೆ ಪಾಠಕ್ಕೆ ಹೋಗಿದ್ದ ಬಾಲಕಿ. ಮನೆ ಪಾಠದಿಂದ ಬಾಲಕಿ ವಾಪಸ್ ಆಗದ ಹಿನ್ನೆಲೆ ಬಾಲಕಿಯ ಹುಡುಕಾಟ. ಮನೆಯ ಬಳಿಯ ನಿರ್ಮಾಣ ಹಂತದ ಕಟ್ಟಡದ ಸಂಪಿನಲ್ಲಿ ಬಾಲಕಿಯ ಶವ ಪತ್ತೆ.

ವಿಚಾರ ತಿಳಿದ ಮಳವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ. ಮಳ್ಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ. ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ. ಮಂಡ್ಯ ಮಿಮ್ಸ್ ಶವಾಗಾರಕ್ಕೆ ಬಾಲಕಿ ಮೃತ ದೇಹ ಶಿಫ್ಟ್.

ಮಂಡ್ಯ ಮಿಮ್ಸ್ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ದತೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮರಣೋತ್ತರ ಪರೀಕ್ಷೆ.ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮವಾಗಿ ವರದಿ ನೀಡಲಿರುವ ಮಂಡ್ಯ ಮಿಮ್ಸ್ ವೈದ್ಯರು.

ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಕೆ ಮೃತದೇಹ ಹಸ್ತಾಂತರಿಸುವ ಸಾಧ್ಯತೆ. ಮಳವಳ್ಳಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಘಟನೆ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ. ಕೊಲೆ ನಡೆದ ಸಂಪಿನ ಸ್ಥಳ ವೀಕ್ಷಿಸಿದ ಯತೀಶ್. ಸ್ಥಳೀಯ ಪೊಲೀಸರಿಂದ ಮಾಹಿತಿ ಕಲೆ ಹಾಕಿದ ಎಸ್ಪಿ.

ಮಾಹಿತಿ ಪಡೆದ ಬಳಿಕ ಮಾಧ್ಯಮಗಳಿಗೆ ಮಾಹಿತಿ. ಪ್ರತಿದಿನ ಟ್ಯೂಷನ್‌ಗೆ ಬಾಲಕಿ ಆಗಮಿಸುತ್ತಿದ್ದಳು. ಈ ಬಗ್ಗೆ ಕೆಲವರನ್ನ ವಿಚಾರಣೆ ಮಾಡಲಾಗ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದು ತಿಳಿಯಲಿದೆ. ಮಂಡ್ಯ ಎಸ್ಪಿ ಎ‌ನ್.ಯತೀಶ್ ಸ್ಪಷ್ಟನೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *