ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯತಿಥಿಯಂದು ಗಣ್ಯರಿಂದ ನಮನ

ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯತಿಥಿಯಂದು ಗಣ್ಯರಿಂದ ನಮನ

ನವದೆಹಲಿ: ಪಂಡಿತ ದೀನದಯಾಳ ಉಪಾಧ್ಯಾಯರ ಪುಣ್ಯತಿಥಿಯ ಅಂಗವಾಗಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮನ ಸಲ್ಲಿಸಿದರು.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಸಂದೇಶದಲ್ಲಿ ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಪಂಡಿತ ದೀನದಯಾಳ ಉಪಾಧ್ಯಾಯರನ್ನು ದೂರದರ್ಶಿ ಚಿಂತಕ ಮತ್ತು ರಾಷ್ಟ್ರ ನಿರ್ಮಾತೃ ಎಂದು ಕರೆದರು. ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಸಮಾಜ ಸೇವೆಗೆ ಸಮರ್ಪಿಸಿದ ಮಹಾನ್ ನಾಯಕರು ಎಂದು ಹೇಳಿದರು.

ಉಪಾಧ್ಯಾಯರ ‘ಏಕಾತ್ಮ ಮಾನವವಾದ’ ತತ್ವವು ಇಡೀ ವಿಶ್ವಕ್ಕೆ ಪ್ರಸ್ತುತವಾಗಿದ್ದು, ಅತೀ ಹಿಂದುಳಿದವರ ಸೇವೆ ಮತ್ತು ನೈತಿಕ ಸಾರ್ವಜನಿಕ ಜೀವನದ ಅವರ ಸಂದೇಶವು ‘ವಿಕಸಿತ ಭಾರತ’ ನಿರ್ಮಾಣದ ದಿಸೆಯಲ್ಲಿ ದೇಶಕ್ಕೆ ಪ್ರೇರಣೆಯಾಗುತ್ತಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ, ಮೌಲ್ಯಾಧಾರಿತ ಪಂಡಿತ ದೀನದಯಾಳ ಉಪಾಧ್ಯಾಯರ ತತ್ವಗಳು ಮತ್ತು ಆಲೋಚನೆಗಳು ದೇಶದ ಪ್ರತಿಯೊಂದು ಪೀಳಿಗೆಗೆ ಮಾರ್ಗದರ್ಶಕವಾಗಿಯೇ ಉಳಿಯುತ್ತವೆ ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಾ ನಮನ ಸಲ್ಲಿಸಿ, ಪಂಡಿತ ದೀನದಯಾಳ ಉಪಾಧ್ಯಾಯರು ಅನೇಕ ಪೀಳಿಗೆಗಳವರೆಗೆ ರಾಷ್ಟ್ರ ನಿರ್ಮಾಣಕ್ಕೆ ಶಾಶ್ವತ ಪ್ರೇರಣೆಯಾಗಿರುವರು ಎಂದು ಹೇಳಿದರು.

Leave a Reply

Your email address will not be published. Required fields are marked *