🚦 ರಸ್ತೆ ಸುರಕ್ಷತೆಗಾಗಿ ಶಿವಮೊಗ್ಗದಲ್ಲಿ ರಿಫ್ಲೆಕ್ಟರ್ ಕ್ಯಾಟ್ ಐಸ್ ಮತ್ತು ಸೋಲಾರ್ ರೋಡ್ ಸ್ಟಡ್ ಅಳವಡಿಕೆ

🚦 ರಸ್ತೆ ಸುರಕ್ಷತೆಗಾಗಿ ಶಿವಮೊಗ್ಗದಲ್ಲಿ ರಿಫ್ಲೆಕ್ಟರ್ ಕ್ಯಾಟ್ ಐಸ್ ಮತ್ತು ಸೋಲಾರ್ ರೋಡ್ ಸ್ಟಡ್ ಅಳವಡಿಕೆ

ಹಿಂದ್ ಸಮಾಚಾರ ನ್ಯೂಸ್ ಡೆಸ್ಕ್ | ಶಿವಮೊಗ್ಗ | ಮಾರ್ಚ್ 2026:

ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ಸಾರ್ವಜನಿಕ ವಾಹನ ಸವಾರರ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ಹಾಗೂ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ನಗರದಲ್ಲಿ ರಾತ್ರಿ ವೇಳೆ ರಸ್ತೆ ಸ್ಪಷ್ಟವಾಗಿ ಕಾಣುವಂತೆ ಹಾಗೂ ಗೋಚರತೆಯನ್ನು ಹೆಚ್ಚಿಸಲು ಶಿವಮೊಗ್ಗ ನಗರದ 14 ಟ್ರಾಫಿಕ್ ಸಿಗ್ನಲ್ ಸರ್ಕಲ್‌ಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮತ್ತು ರಸ್ತೆ ಹಂಪ್ಸ್ ಇರುವ ಸ್ಥಳಗಳಲ್ಲಿ ರಿಫ್ಲೆಕ್ಟರ್ ಕ್ಯಾಟ್ ಐಸ್‌ಗಳು ಮತ್ತು ಸೋಲಾರ್ ರೋಡ್ ಸ್ಟಡ್‌ಗಳನ್ನು ಅಳವಡಿಸಲಾಗಿದೆ.

ಈ ಕ್ರಮವು ವಿಶೇಷವಾಗಿ ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ದಾರಿ ಸ್ಪಷ್ಟವಾಗಿ ಕಾಣಲು ಸಹಾಯಕವಾಗಿದ್ದು, ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇದರೊಂದಿಗೆ ಸಾರ್ವಜನಿಕರು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ಎಲ್ಲಾ ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಅಗತ್ಯ ಸಂಚಾರ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
👉 ಸುರಕ್ಷಿತವಾಗಿ ಚಲಿಸಿ – ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *