ಭದ್ರಾವತಿಯಲ್ಲಿ ಗಲಭೆ ನಿಯಂತ್ರಣ ಕಾರ್ಯಗಾರ: ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ

ಭದ್ರಾವತಿಯಲ್ಲಿ ಗಲಭೆ ನಿಯಂತ್ರಣ ಕಾರ್ಯಗಾರ: ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಹಾಗೂ 97 RAF ಭದ್ರಾವತಿ ಇವರ ಸಂಯುಕ್ತ ಸಹಯೋಗದಲ್ಲಿ ಇಂದು ಬೆಳಗ್ಗೆ ಗಲಭೆ ನಿಯಂತ್ರಣ ಕ್ರಮಗಳ ಕುರಿತು “Anti Revolt Drill Workshop” ಅನ್ನು ಆಯೋಜಿಸಲಾಯಿತು. ಈ ಕಾರ್ಯಗಾರವು ಭದ್ರಾವತಿಯ ಎಂಪಿಎಂ ಆವರಣ ಹಾಗೂ RAF ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್, ಡಿ.ಎ.ಆರ್ (DAR) ಹಾಗೂ ಎಸ್‌ಎಎಫ್ (SAF) ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದರು. ಗಲಭೆ ಹಾಗೂ ಇತರೆ ಪ್ರಮುಖ ಬಂದೋಬಸ್ತ್ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಕಾನೂನು-ಸುವ್ಯವಸ್ಥೆ ಕಾಪಾಡುವ ವಿಧಾನಗಳು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸುವ ತಂತ್ರಗಳು ಕುರಿತು ಸಮಗ್ರ ಮಾರ್ಗದರ್ಶನ ನೀಡಲಾಯಿತು.

ತರಬೇತಿಯಲ್ಲಿ ಗಲಭೆ ನಿಯಂತ್ರಣ ಸಾಧನಗಳ ಬಳಕೆ, ಗುಂಪು ನಿಯಂತ್ರಣ ತಂತ್ರಗಳು, ತುರ್ತು ಪರಿಸ್ಥಿತಿಯಲ್ಲಿ ತ್ವರಿತ ಪ್ರತಿಕ್ರಿಯೆ ನೀಡುವ ವಿಧಾನಗಳು ಹಾಗೂ ಸಂಯೋಜಿತ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಲಾಯಿತು. ಹಿರಿಯ ಅಧಿಕಾರಿಗಳು ಸಿಬ್ಬಂದಿಗಳಿಗೆ ಪ್ರಾಯೋಗಿಕ ಪ್ರದರ್ಶನಗಳ ಮೂಲಕ ತಿಳುವಳಿಕೆ ನೀಡಿದರು.

ಈ ರೀತಿಯ ಕಾರ್ಯಗಾರಗಳು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಸಾರ್ವಜನಿಕರ ಭದ್ರತೆಯನ್ನು ಬಲಪಡಿಸಲು ಸಹಕಾರಿಯಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಮೇಘನ ಗಣೇಶ್

Leave a Reply

Your email address will not be published. Required fields are marked *