ಸಾಗರದಲ್ಲಿ ಐತಿಹಾಸಿಕ ಮಾರಿಕಾಂಬೆ ಜಾತ್ರೆಗೆ ಭವ್ಯ ಆರಂಭಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ, ಸಾವಿರಾರು ಭಕ್ತರಿಂದ ದರ್ಶನ

ಸಾಗರದಲ್ಲಿ ಐತಿಹಾಸಿಕ ಮಾರಿಕಾಂಬೆ ಜಾತ್ರೆಗೆ ಭವ್ಯ ಆರಂಭ
ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ, ಸಾವಿರಾರು ಭಕ್ತರಿಂದ ದರ್ಶನ

ಸಾಗರ: ಶಕ್ತಿದೇವತೆ ಶ್ರೀ ಮಾರಿಕಾಂಬೆಯ ಐತಿಹಾಸಿಕ ಜಾತ್ರೆಗೆ ಇಂದು ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ಅಧಿಕೃತ ಚಾಲನೆ ದೊರೆಯಿತು. ಒಂಬತ್ತು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಮೊದಲ ದಿನವೇ ದೇವಿಯ ದರ್ಶನಕ್ಕೆ ಭಕ್ತಸಾಗರ ಹರಿದುಬಂದಿತು.

ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಜಾತ್ರೆಯ ಆರಂಭವಾಯಿತು. ಬೆಳಿಗ್ಗೆ 3 ಗಂಟೆಗೆ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತಾಯಿ ಮಾರಿಕಾಂಬೆಯ ತಾಳಿ ಹಾಗೂ ಆಭರಣಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳವಾದ್ಯಗಳ ನಡುವೆ ದೇವಿಯ ಆಭರಣಗಳನ್ನು ನಗರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ತವರುಮನೆಗೆ ತರಲಾಯಿತು.

ತವರುಮನೆಯಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಮಾರಿಕಾಂಬೆ ದೇವಿಯ ನಯನಮನೋಹರ ವಿಗ್ರಹಕ್ಕೆ ವೈಭವೋಪೇತ ಅಲಂಕಾರ ನೆರವೇರಿಸಲಾಯಿತು. ಭಾರಿ ಗಾತ್ರದ ಹೂವಿನ ಹಾರ, ವೈವಿಧ್ಯಮಯ ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಶಾಸಕ ಗೋಪಾಲಕೃಷ್ಣ ಬೇಳೂರು ದರ್ಶನ
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ರೆಯ ಮೊದಲ ದಿನವೇ ಕುಟುಂಬ ಸಮೇತ ಆಗಮಿಸಿ ಗ್ರಾಮ ದೇವತೆಯ ದರ್ಶನ ಪಡೆದರು. ನಂತರ ದೇವಸ್ಥಾನದ ಸುತ್ತಮುತ್ತಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಜಾತ್ರೆಯ ಮಹತ್ವ ಹಾಗೂ ಭಕ್ತರಿಗೆ ನೀಡಿರುವ ಸೌಲಭ್ಯಗಳ ಕುರಿತು ವಿವರಿಸಿದರು.
ಸ್ಲಗ್: ಸಾಗರ ಐತಿಹಾಸಿಕ ಮಾರಿಕಾಂಬೆ ಜಾತ್ರೆ
ಬೈಟ್: ಗೋಪಾಲಕೃಷ್ಣ ಬೇಳೂರು
(ಶಾಸಕ, ಸಾಗರ ವಿಧಾನಸಭಾ ಕ್ಷೇತ್ರ)

Leave a Reply

Your email address will not be published. Required fields are marked *