ಕಾರ್ಗಿಲ್ ವಿಜಯೋತ್ಸವ ಸ್ವಾಭಿಮಾನ ಸಂಕೇತ.

ಕಾರ್ಗಿಲ್ ವಿಜಯೋತ್ಸವ ಸ್ವಾಭಿಮಾನ ಸಂಕೇತ.

ಕಾರ್ಗಿಲ್ ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮತ್ತು ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು
ಮಾಜಿ ಶಾಸಕರಾದ ಎಲ್ ನಾಗೇಂದ್ರ ಹೇಳಿದರು.

ಕಾರ್ಗಿಲ್ ವಿಜಯ ದಿವಸ್ ನಿಮಿತ್ತ ಯುವ ಭಾರತ್ ಸಂಘಟನೆ ವತಿಯಿಂದ ಬುಧವಾರ ಫೀಲ್ಡ್ ಮಾರ್ಷಲ್ ಕರಿಯಪ್ಪ ವೃತ್ತ ದಲ್ಲಿ ಭಾರತ ದ್ವಜ ಹಿಡಿದು ಯೋಧರಿಗೆ ಜೈಕಾರ ಕೂಗುತ್ತಾ ಸಂಭ್ರಮಿಸಿದರು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ನಾಗೇಂದ್ರ
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಸೇವೆ ಅವಿಸ್ಮರಣೀಯ. ದೇಶದ ರಕ್ಷಣೆಗೆ ತಮ್ಮ ಜೀವ ಮುಡಿಪಾಗಿಟ್ಟು ಸೇವೆ ಸಲ್ಲಿಸುವ ಸೈನಿಕರಿಗೆ ಪ್ರತಿಯೊಬ್ಬರೂ ಋಣಿಯಾಗಿರಬೇಕು. ಇಂತಹ ಮಹಾನ್ ಸೇವೆಯಲ್ಲಿ ತೊಡಗಿರುವ ಯೋಧರಿಗೆ ಗೌರವದಿಂದ ಕಾಣಬೇಕು ಎಂದು ಕರೆ ನೀಡಿದರು.
ಮಹಾಪೌರರಾದ ಶಿವಕುಮಾರ್ ಮಾತನಾಡಿ
ದೇಶಕ್ಕಿಂತ ದೊಡ್ಡದು ಅಥವಾ ಮಹತ್ವದ್ದು ಯಾವುದೂ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ಹೆಜ್ಜೆ ಇಡಬೇಕು. ನಮ್ಮೆಲ್ಲರ ರಕ್ಷಣೆಗಾಗಿ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರು ಮತ್ತು ಕಾರ್ಗಿಲ್ ಕದನದಲ್ಲಿ ವೀರಮರಣ ಹೊಂದಿದ ಯೋಧರಿಗೆ ಬಗ್ಗೆ ಹ್ಯಾಟ್ಸಾಫ್.
ಎಂದು ಹೇಳಿದರು

ಮಹಾಪೂರದ ಶಿವಕುಮಾರ್, ಮಾಜಿ ಶಾಸಕರಾದ ಎಲ್ ನಾಗೇಂದ್ರ, ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ನಗರಪಾಲಿಕ ಸದಸ್ಯರಾದ ಪ್ರಮೀಳಾ ಭರತ್, ಯುವ ಭಾರತ್ ಸಂಘಟನೆ ಅಧ್ಯಕ್ಷರಾದ ಜೋಗಿ ಮಂಜು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮನಂದೀಶ್, ಲಕ್ಷ್ಮೀದೇವಿ, ಜ್ಯೋತಿ ರೇಚಣ್ಣ, ರೇಣುಕ ರಾಜ್, ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ , ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಯುವ ಭಾರತ್ ಸಂಘಟನೆಯ ಶರತ್ ಭಂಡಾರಿ, ಆನಂದ್, ಸುರೇಶ್ ಗೋಲ್ಡ್, ಮುತ್ತಣ್ಣ, ಜಿ ಎಂ ಪಂಚಾಕ್ಷರಿ, ವಿಘ್ನೇಶ್ವರ ಭಟ್ ,ಶ್ರೀನಿವಾಸ್, ಜೀವನ್, ಜಗದೀಶ್, ಕಡಕೋಳ ಜಗದೀಶ್, ಸುಚೇಂದ್ರ, ಚಕ್ರಪಾಣಿ, ನಾಗಶ್ರೀ, ವಿದ್ಯಾ , ನೆಹ ನೈನಾ, ಮಧು ಏನ್ ಪೂಜಾರ್, ಜೀವನ್, ಶಿವರಾಜ್, ರವಿಶಂಕರ್ ಹಾಗೂ ಇನ್ನಿತರರು ಭಾಗವಹಿಸಿದರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116
Website :www.shivamotors.net

Leave a Reply

Your email address will not be published. Required fields are marked *