ಕೇಂದ್ರ ಸರ್ಕಾರದ ” ಜಲಜೀವನ್ ಮಿಶನ್ ತಾಳಗುಪ್ಪಗ್ರಾಮ ವಿಫಲ – ಹರ್ ಘರ್ ಜಲ್ ” ಯೋಜನೆ ಅನುಷ್ಠಾನ ನೆನೆಗುದಿಗೆ.
ತಾಳಗುಪ್ಪ :- ಕುಡಿಯುವ ನೀರಿನ ಸಂಪರ್ಕ ನೀಡಿ ವಸಂತಗಳೇ ಉರುಳಿದರೂ ಬಾರದ ಒಂದೇ ಒಂದು ತೊಟ್ಟು ನೀರು. ಮೋದಿ ಕನಸು ನನಸಾಗಲು ನಿರಾಸಕ್ತಿಯತ್ತ ಶಿವಮೊಗ್ಗ ಜಿಲ್ಲಾಡಳಿತ, ಕಾಣದಂತೆ ಮಾಯವಾದ ಶಿವಮೊಗ್ಗ ಜಿಲ್ಲಾಪಂಚಾಯತ್ ಕುಡಿಯುವ ನೀರು ವಿಭಾಗದ ಬೇಜವಾಬ್ದಾರಿ ಅಧಿಕಾರಿಗಳು, ಪ್ರಚಾರಕ್ಕೆ ಮಾತ್ರಾ ಸೀಮಿತವಾದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ, ಕೋಟ್ಯಂತರ ರೂ ಸಾರ್ವಜನಿಕ ತೆರಿಗೆ ಹಣದ ಅನುದಾನ ನೀರಲ್ಲಿ ಹೋಮ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ಸಾರ್ವಜನಿಕ ತೆರಿಗೆ ವಿನಿಯೋಗಿಸಿದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ” ಜಲ್ ಜೀವನ್ ಮಿಷನ್ – ಹರ್ ಘರ್ ಜಲ್ ” ಯೋಜನೆ ಅನುಷ್ಠಾನ ನೆನೆಗುದಿಗೆ ಗೊಳಿಸುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಶಿವಮೊಗ್ಗ ಜಿಲ್ಲಾಪಂಚಾಯತ್ ನಿರ್ಲಕ್ಷತನ ಈ ಯೋಜನೆ ನಾಗರೀಕರಿಗೆ ತಲುಪುವಲ್ಲಿ ಸಂಪೂರ್ಣ ವಿಫಲತೆ ಕಂಡಿದ್ದೂ, ಸಾರ್ವಜನಿಕ ತೆರಿಗೆ ಹಣ ನೀರು ಪಾಲಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
“ಹರ್ ಘರ್ – ಹರ್ ಜಲ್ ” ಅನುಷ್ಠಾನ ಮಾಡುವಂತಹ ಸಾರ್ವಜನಿಕ ತೆರಿಗೆ ಹಣದಲ್ಲಿ ಸಂಬಳ ತಿನ್ನುತ್ತಿರುವ ಬೇಜವಾಬ್ದಾರಿ ಅಭಿಯಂತರರು – ಅಧಿಕಾರಿಗಳು ನಾಪತ್ತೆಯಾಗಿದ್ದೂ ಶಿವಮೊಗ್ಗ ಜಿಲ್ಲಾಧಿಕಾರಿಗಳೂ ಹಾಗೂ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹುಡುಕಿ ಕೊಡುತ್ತೀರಾ ಎಂಬುದಾಗಿ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ “ಹರ್ ಘರ್ – ಹರ್ ಜಲ್ ” ವರ್ಣರಂಜಿತವಾಗಿ ಬಣ್ಣ ಹೊಡೆದು ನಲ್ಲಿ ಕಟ್ಟೆಯಲ್ಲಿ ಯಾವತ್ತು ಕುಡಿಯುವ ನೀರು ಬರುತ್ತೆ ಎಂದು ಆಕಾಶ ನೋಡುತ್ತಿರುವ ಗ್ರಾಮಸ್ಥರು ಆಗ್ರಹಿಸಿದ್ದಾರೆ
ವರದಿ-ಓಂಕಾರ ಎಸ್. ವಿ. ತಾಳಗುಪ್ಪ

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.



