ಜಲ ಸಂಪನ್ಮೂಲ, ನಗರ ಅಭಿವೃದ್ಧಿ ಕುರಿತು ಆಸ್ಟ್ರೇಲಿಯ ಹೈಕಮಿಷನರ್ ಜತೆ ಡಿಸಿಎಂ ಡಿ ಕೆ ಶಿವಕುಮಾರ್ ಚರ್ಚೆ.
ಬೆಂಗಳೂರು:ಆಸ್ಟ್ರೇಲಿಯ ಮತ್ತು ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಜಲ ಸಂಪನ್ಮೂಲ, ಕೌಶಲ್ಯ ಹಾಗೂ ನಗರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಬಗ್ಗೆ ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಫರೆಲ್ ಜತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಮಾಲೋಚನೆ ನಡೆಸಿದರು.
ಬ್ಯಾರಿ ಫರೆಲ್ ಅವರು, ದಕ್ಷಿಣ ಭಾರತದ ಕೌನ್ಸೆಲ್ ಜನರಲ್ ಸಾರಾ ಕಿರ್ಲೆವ್ ಜತೆ ಡಿ ಕೆ ಶಿವಕುಮಾರ್ ಅವರನ್ನು ಗುರುವಾರ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದ್ದರು.
ಯುವ ಸಮುದಾಯಕ್ಕೆ ಹೆಚ್ಚು ಉದ್ಯೋಗ ಅವಕಾಶಗಳು ಲಭ್ಯವಾಗುವಂತೆ ಯೋಜನೆಗಳನ್ನು ರೂಪಿಸಲು ಸಹಕರಿಸುವಂತೆ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ಬೆಂಗಳೂರಲ್ಲಿ ಸುಸಜ್ಜಿತ ರಸ್ತೆಗಲಿ, ಸುಗಮ ವಾಹನ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳ ಅನುಷ್ಠಾನಕ್ಕೆ ಕೈ ಜೋಡಿಸುವಂತೆ ಅವರು ಹೇಳಿದರು.
ಅಭಿವೃದ್ಧಿ ಯೋಜನೆಗಳ ಪರಿಶೀಲನೆಗೆ ಆಸ್ಟ್ರೇಲಿಯಾಗೆ ಬರುವಂತೆ ಡಿ ಕೆ ಶಿವಕುಮಾರ್ ಅವರಿಗೆ ಬ್ಯಾರಿ ಫರೆಲ್ ಅಹ್ವಾನ ನೀಡಿದರು. ಖಂಡಿತ ಬರುವುದಾಗಿ ಶಿವಕುಮಾರ್ ಸಮ್ಮತಿಸಿದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.



