ಭಾರತವು ಹೆಮ್ಮೆ ಪಡುತ್ತಾ ಇದೆ ಮಹಿಳೆಯರ ಸಾಧನೆಗಳ ಬಗ್ಗೆ. ಹಾಗೂ ಮಹಿಳೆಯರ ವಿವಿಧ ಕ್ಷೇತ್ರಗಳಲ್ಲಿ ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬಹಳ ಶ್ರಮಿಸುತ್ತಿದೆ.

ಪ್ರಧಾನಿ ನರೇಂದ್ರಮೋದಿಯವರ ಟ್ವಿಟ್ಟರ್ ಖಾತೆಯಲ್ಲಿ ಅಂತರ ರಾಷ್ಟೀಯ ಮಹಿಳಾ ದಿನದಂದು ನಮ್ಮ ನಾರಿ ಶಕ್ತಿಯ ಸಾಧನೆಗಳನ್ನು ಗೌರವಿಸಿದ್ದರು. ಭಾರತದ ಪ್ರಗತಿಯಲ್ಲಿ ಮಹಿಳೆಯರ ಪಾತ್ರವನ್ನು ನಾವು ಗೌರವಿಸುತ್ತೇವೆ. ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಲೆ ಇರುತ್ತದೆ. ಎಂದು ನರೇಂದ್ರ ಮೋದಿಯವರು ಟ್ವಿಟ್ ನಲ್ಲಿ ಹಂಚಿ ಕೊಂಡಿದ್ದಾರೆ. ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳೆಯರ ಸಾಮಾಜಿಕ, ರಾಜಕೀಯ ಆರ್ಥಿಕ, ಮತ್ತು ಸಾಂಸ್ಕೃತಿಕ ಸಾಧನೆಗಳನ್ನು ಗೌರವಿಸಲು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಸಮಾಜವು ಒಡ್ಡಿದ ವಿವಿಧ ಸವಾಲುಗಳ ನಡುವೆಯೂ ಪ್ರಪಂಚದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮಹಿಳೆಯರನ್ನು ಈ ದಿನ ಸ್ಮರಿಸುತ್ತದೆ.




