ಹೆಗ್ಗೋಡು ಗ್ರಾ.ಪಂ ಮೇಲ್ಮಹಡಿ ನೂತನ ಕಟ್ಟಡ ಉದ್ಘಾಟನೆ – ಶಾಸಕರು ಗೋಪಾಲಕೃಷ್ಣ ಬೇಳೂರು
ಸಾಗರ: ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮ ಪಂಚಾಯತ್ ಕಾರ್ಯಾಲಯದ ಮೇಲ್ಮಹಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಟ್ಟಡವನ್ನು ಸೋಮವಾರ ಉದ್ಘಾಟಿಸಲಾಯಿತು. ಸಾಗರ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಉದ್ಘಾಟನಾ ನೆರವೇರಿಸಿದರು.

ಹೆಗ್ಗೋಡು ಗ್ರಾಮ ಪಂಚಾಯತ್‌ನ ಸ್ವಂತ ಸಂಪನ್ಮೂಲ, 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಕಟ್ಟಡ ನಿರ್ಮಾಣ ಅನುದಾನದಡಿ ಈ ಮೇಲ್ಮಹಡಿ ಕಟ್ಟಡವನ್ನು ನಿರ್ಮಿಸಲಾಗಿದೆ. ಗ್ರಾಮ ಪಂಚಾಯತ್ ಆಡಳಿತಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಮಂಜಪ್ಪಗೌಡ ಉಪಸ್ಥಿತರಿದ್ದರು.
ಇದಲ್ಲದೆ ಧರ್ಮಪ್ಪ, ರಾಜೇಶ್, ಸುಮಾ, ಗುರುದತ್, ಅರುಣ್ ಕುಮಾರ್, ಕೌಸಲ್ಯ, ಲಲಿತ, ಶೋಭಾ, ಪವಿತ್ರ, ಮಂಡಗಳಲೆ ಗಣಪತಿ, ಅಶೋಕ್ ಬೇಳೂರು, ಶಿವಪ್ರಕಾಶ್, ಗುರುಕೃಷ್ಣ ಶನೈ ಸೇರಿದಂತೆ ಹಲವರು ಭಾಗವಹಿಸಿದ್ದರು.




