ಭಕ್ತರು ಕೈ ಕಾಲು ಮುರಿದುಕೊಂಡರೂ ಇತ್ತ ಸುಳಿಯದ ಬೇಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳು – ಓಂಕಾರ ಎಸ್. ವಿ. ತಾಳಗುಪ್ಪ

ಇಕ್ಕೇರಿ (ಸಾಗರ ): ಭಕ್ತರು ಕೈ ಕಾಲು ಮುರಿದುಕೊಂಡರೂ ಇತ್ತ ಸುಳಿಯದ ಬೇಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳು – ಓಂಕಾರ ಎಸ್. ವಿ. ತಾಳಗುಪ್ಪ.

ಮುಜರಾಯಿ ಇಲಾಖೆಯ ನಿರ್ಲಕ್ಷತನ – ದೇವಸ್ಥಾನ ಸುತ್ತಲೂ ನೆಲಕ್ಕೆ ಹಾಸಿದ ಕಲ್ಲುಗಳು ಪಾಚಿಯಿಂದ ಪ್ರವಾಸಿಗರು & ಭಕ್ತರು ಕೈ ಕಾಲು ಮುರಿದುಕೊಂಡರೂ ಇತ್ತ ಸುಳಿಯದ ಬೇಜವಾಬ್ದಾರಿ ಮುಜರಾಯಿ ಇಲಾಖೆಯ ಅಧಿಕಾರಿಗಳು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಇಕ್ಕೇರಿ ದೇವಸ್ಥಾನದ ಕಾಣಿಕೆ ಹುಂಡಿಗೆ ಓಡಿ ಬರುವ ಮುಜರಾಯಿ ಇಲಾಖೆ ಅಧಿಕಾರಿಯ ಅಧಿಕಾರಿಗಳು. ಇಕ್ಕೇರಿ ಅಘೋರೇಶ್ವರ ದೇವಸ್ಥಾನಕ್ಕೆ ಒಡಾಡುವ ಕಲ್ಲಿನ ಮೇಲೆ ಪಾಚಿ ಕಟ್ಟಿ ಬಹು ದಿನಗಳು ಕಳೆದರೂ ಸ್ವಚ್ಚತೆ ಇಲ್ಲ…ಕಣ್ಮುಚ್ಚಿ ಕುಳಿತಿರುವ ದೇವಸ್ಥಾನದ ಆಡಳಿತ ಮಂಡಳಿ. ಇದರಿಂದಾಗಿ ಪ್ರವಾಸಿಗರು ಭಕ್ತರು.

ಜಾರಿ ಬಿದ್ದಿರುವ ಘಟನೆ ನಡೆಯುತ್ತಿದೆ. ದೇವಸ್ಥಾನದ ಸ್ವಚ್ಚತೆ ಮಾಡುವಲ್ಲಿ ಮುಜರಾಯಿ ಇಲಾಖೆ ಗಮನ ಕೊಡಬೇಕು. ಪ್ರತಿ ಬಾರಿ ಕಾಣಿಕೆ ಹಣವನ್ನು ತುಂಬಿಕೊಂಡು ಹೋಗುವ ಮುಜರಾಯಿ ಇಲಾಖೆಯ ಅಧಿಕಾರಿಗಳು. ಇಷ್ಟೆಲ್ಲಾ ಕಲ್ಲುಗಳು ಪಾಚಿ ಕಟ್ಟಿದ್ದು ಸ್ವಚ್ಛತೆ ಮಾಡುವುದನ್ನು ಮರೆತಿರುವಂತೆ ಕಾಣುತ್ತಿದೆ. ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ, ಜನಸ್ನೇಹಿ, ಅಭಿವೃದ್ಧಿ ಹರಿಕಾರರಾಗಿರುವ ಸನ್ಮಾನ್ಯ ಶ್ರೀ ಹರತಾಳು ಹಾಲಪ್ಪ ರವರು ಕೂಡಲೇ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಭಕ್ತರು ಹಾಗೂ ಪ್ರವಾಸಿಗರು ಮನವಿ ಮಾಡಿದ್ದಾರೆ.

ವರದಿ: ಓಂಕಾರ ಎಸ್. ವಿ. ತಾಳಗುಪ್ಪ

Leave a Reply

Your email address will not be published. Required fields are marked *