ಮಲೆನಾಡಿನಲ್ಲಿ ಧಾರಾಕಾರ ಮಳೆ ಸಂತ್ರಸ್ತೆಯ ನೆರವಿಗೆ ಮುಂದಾದ ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು

ಸಾಗರ : ಮಲೆನಾಡಿನಲ್ಲಿ ಧಾರಾಕಾರ ಮಳೆ ಸಂತ್ರಸ್ತೆಯ ನೆರವಿಗೆ ಮುಂದಾದ ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು.

ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ತಾಲ್ಲೂಕು ಉಳ್ಳೂರು ಗ್ರಾಮ ಪಂಚಾಯಿತಿಯ ಕಾಸ್ಪಾಡಿ ಗ್ರಾಮದ ಬಡ ಮಹಿಳೆ ನೀಲಮ್ಮ ಕೋಂ ಭುಾಯ೯ಪ್ಪ ಇವರ ಮನೆ ಸಂಪೂರ್ಣವಾಗಿ ಬಿದ್ದುಹೋಗಿದೆ. ಮನೆಯಲ್ಲಿರುವ ಅನೇಕ ವಸ್ತುಗಳು ಈಗಾಗಲೇ ನಾಶವಾಗಿದ್ದು ,ಊಟ ಮತ್ತು ಉಳಿಯುವ ವ್ಯವಸ್ಥೆ ಇಲ್ಲದೆ ಈ ಮಹಿಳೆ ದಿಗ್ಭ್ರಾಂತರಾಗಿದ್ದಾರೆ. ಸ್ಥಳಕ್ಕೆ ಅನೇಕ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದು, ಆದರೆ ಮಹಿಳೆಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕಾಗಿದ್ದು ಆದಷ್ಟು ಬೇಗ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ಈ ಬಡ ಮಹಿಳೆಗೆ ನೆರವಾಗಿ ಊಟ ವಸತಿ ವ್ಯವಸ್ಥೆ ಮಾಡಬೇಕೆಂದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ಮುಕ್ತಾಯರಾದ ಬೇಳೂರು ಗೋಪಾಲಕೃಷ್ಣರವರು ಆಗ್ರಹಿಸಿದರು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *