ದೆಹಲಿ ಹೊಟೇಲೊಂದಕ್ಕೆ ಬರೊಬ್ಬರಿ 23 ಲಕ್ಷ ರೂ.ವಂಚನೆ,ಕರ್ನಾಟಕ ಮೂಲದವನನ್ನು ಪುತ್ತೂರಿನಲ್ಲಿ ಸೆರೆ ಹಿಡಿದ ಪೊಲೀಸರು

ದೆಹಲಿ : ದೆಹಲಿ ಹೊಟೇಲೊಂದಕ್ಕೆ ಬರೊಬ್ಬರಿ 23 ಲಕ್ಷ ರೂ.ವಂಚನೆ,ಕರ್ನಾಟಕ ಮೂಲದವನನ್ನು ಪುತ್ತೂರಿನಲ್ಲಿ ಸೆರೆ ಹಿಡಿದ ಪೊಲೀಸರು.

23 ಲಕ್ಷ ರೂಪಾಯಿ ಬಿಲ್ ವಂಚಿಸಿ,ಪರಾರಿಯಾಗಿದ್ದ ಮೊಹಮ್ಮದ್ ಶರೀಫ್ ನನ್ನು ಪುತ್ತೂರಿನಲ್ಲಿ ಸೆರೆಯಾಗಿದ್ದಾನೆ.ಈತ ದೆಹಲಿಯ ಸರೋಜಿನಿ ನಗರದಲ್ಲಿರುವ ಲೀಲಾ ಪ್ಯಾಲೇಸ್ ಎಂಬ ಪಂಚತಾರಾ ಹೋಟೆಲ್‌ಗೆ 23 ಲಕ್ಷ ರೂಪಾಯಿ ಬಿಲ್ ವಂಚಿಸಿದ್ದ.ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ.ಇದೀಗ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ.41ವರ್ಷ ವಯಸ್ಸಿನ ಇವನನ್ನು ಈಗ ದೆಹಲಿ ಪೊಲೀಸರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಿದ್ದಾರೆ. ತಾನು ಕರ್ನಾಟಕದವನೇ ಎಂದು ಪೊಲೀಸರ ಎದುರು ಶರೀಫ್ ಬಾಯ್ದಿಟ್ಟಿದ್ದಾಗಿ ವರದಿಯಾಗಿದೆ..!!

ಏನಿದು ಘಟನೆ..?
ಸುಳ್ಳು ಹೇಳಿಕೊಂಡು ಬಂದಿದ್ದಾನೆ ಎನ್ನಲಾದ ಮೊಹಮ್ಮದ್ ಶರೀಫ್ ಆಗಸ್ಟ್ ತಿಂಗಳಲ್ಲಿ ಲೀಲಾ ಪ್ಯಾಲಿಸ್‌ ಹೋಟೆಲ್‌ಗೆ ಹೋಗಿದ್ದ. ತಾನು ಯುಎಇಯಿಂದ ಬಂದಿದ್ದೇನೆ. ಅಭುದಾಬಿ ರಾಜಮನೆತನದವರಾದ ಶೇಖ್ ಫಲಾಹ್ ಬಿನ್ ಜಾಯೇದ್ ಅಲ್ ನಹ್ಯಾನ್ ಅವರಿಗೆ ಆಪ್ತನಾಗಿದ್ದೆ. ನಾನು ಅಲ್ಲಿಯೇ ಕೆಲಸ ಮಾಡುತ್ತಿದ್ದೆ. ಈಗಲೂ ಯುಎಇ ಸರ್ಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ. ಅಷ್ಟೇ ಇಲ್ಲ. ಯುಎಇ ನಿವಾಸಿ ಎಂಬುದನ್ನು ನಂಬಿಸಲು ಅಲ್ಲಿನ ಒಂದು ಫೇಕ್ ಐಡಿ ಕಾರ್ಡ್ ಕೂಡ ಕೊಟ್ಟು ಹೋಟೆಲ್ ಸಿಬ್ಬಂದಿಯನ್ನು ನಂಬಿಸಿ ಬಿಟ್ಟಿದ್ದ.ಅದೆಲ್ಲ ಪ್ರಕ್ರಿಯೆಗಳು ಮುಗಿದ ನಂತರ ಹೊಟೇಲ್ ನ ಒಳ ಪ್ರವೇಶಿಸಿದ .ಬಳಿಕ ಯಾರಿಗೂ ಹೇಳದೆ ಕೇಳದೆ ಹೋಟೆಲ್‌ನಿಂದ ಪರಾರಿಯಾಗಿ ಬಿಟ್ಟಿದ್ದ. ರೂಂ ನಂಬರ್ 172ರಲ್ಲಿ ಇದ್ದ ಬೆಳ್ಳಿಯ ಪಾತ್ರೆಗಳು, ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದ ಎಂಬುದರ ಬಗ್ಗೆ ವರದಿಯಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಜನವರಿ13ರಂದು ಹೋಟೆಲ್‌ನವರು ಪೊಲೀಸರಿಗೆ ದೂರು ಕೊಟ್ಟಾಗ.

ಬರೋಬ್ಬರಿ ೩೫ ಲಕ್ಷ ಬಿಲ್
ಈತನ ಬಿಲ್ ಕೇಳಿದ್ರೆ ಶಾಕ್ ಆಗ ಬಹುದು. ಬರೋಬ್ಬರಿ 35 ಲಕ್ಷ ರೂಪಾಯಿ ಬಿಲ್ಆಗಿತ್ತು.ಅದರಲ್ಲಿ 11.5 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಇನ್ನೂ 23 ಲಕ್ಷ ರೂಪಾಯಿ ಕೊಡುವುದು ಬಾಕಿ ಇದೆ ಎಂದು ಹೋಟೆಲ್ ನವರು ದೂರಿನಲ್ಲಿ ತಿಳಿಸಿದ್ದಾರೆ. ಮತ್ತು ಆತನಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು.

ಪುತ್ತೂರಿನಲ್ಲಿ ಪತ್ತೆ:
ಈಗ ಪೊಲೀಸರಿಂದ ಬಂಧಿತನಾಗಿರುವ ಮೊಹಮ್ಮದ್ ಶರೀಫ್ ‘ನಾನೊಬ್ಬ ಸ್ನಾತಕೋತ್ತರ ಪದವೀಧರ. ನಿರುದ್ಯೋಗಿ. ಹಲವು ಉದ್ಯಮಗಳನ್ನು ಪ್ರಾರಂಭಿಸಿದೆ. ಯಾವುದೂ ಯಶಸ್ಸು ಕಾಣಲಿಲ್ಲ. ದುಬೈಗೂ ಹೋಗಿ, ಅಲ್ಲಿ ರಿಯಲ್ ಎಸ್ಟೇಟ್ ಮತ್ತು ಮರಳು ಉದ್ದಿಮೆ ನಡೆಸಿದೆ’ ಎಂದು ಹೇಳಿಕೊಂಡಿದ್ದಾನೆ. ಶರೀಫ್, ಯುಎಇ ಸರ್ಕಾರದ ಜತೆ ಸಂಪರ್ಕವಿದೆಯೆಂದು ಹೇಳುತ್ತಿದ್ದಾನೆ.ಆದರೆ ನಾವು ಈ ವಿಚಾರವನ್ನು ಇನ್ನಷ್ಟು ತನಿಖೆ ನಡೆಸುತ್ತಿದ್ದೇವೆ ಎಂದೂ ಪೊಲೀಸರು ತಿಳಿಸಿದ್ದಾರೆ. ‘ಶರೀಫ್ ಪತ್ತೆಗಾಗಿ ಶೋಧ ನಡೆಸಿದ ಬಳಿಕ, ಪುತ್ತೂರಿನಲ್ಲಿ ಪತ್ತೆಯಾಗಿದ್ದಾನೆ’ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *