“412 ನೇ ದಸರಾ ಉದ್ಘಾಟಕರು ಯಾರು”?

ಮೈಸೂರು: 412 ನೇ ದಸರಾ ಉದ್ಘಾಟಕರು ಯಾರು? .ದಸರಾ ಉದ್ಘಾಟಕರೇ ದಸರೆಯ ಕೇಂದ್ರ ಬಿಂದು.

ವಿಶ್ವ ವಿಖ್ಯಾತ ನಾಡಹಬ್ಬ ದಸರಾ 2022
ಸೆ.26 ರಿಂದ ಅ.5 ರವರಗೆ ಒಂಬತ್ತು ದಿನಗಳ ಕಾಲ ನವರಾತ್ರಿ ಸಂಭ್ರಮ ಕಳೆಕಟ್ಟಲಿದೆ.ದಸರಾ ಆರಂಭಕ್ಕೆ ಇನ್ನೂ 16 ದಿನ ಬಾಕಿಯಿದೆ.ದಸರಾ ಉದ್ಘಾಟಕರೇ ದಸರೆಯ ಕೇಂದ್ರ ಬಿಂದು ಆಗಿದ್ದು
ರಾಜ್ಯ ಸರ್ಕಾರ ನಾಡಹಬ್ಬ ದಸರೆ- 2022ರ ಉದ್ಘಾಟಕರನ್ನಾಗಿ ಯಾರನ್ನೂ ಆಯ್ಕೆ ಮಾಡಬಹುದೆಂದು ಹುಡುಕಾಟ ನಡೆಸುತ್ತಿದೆ.

ಈ ಬಾರಿಯ ದಸರಾ ಉದ್ಘಾಟಕರ ಹುಡುಕಾಟದ ಹೊಣೆ ರಾಜ್ಯ ಸರ್ಕಾರದ ಮೇಲಿದೆ

ಯಾರ್ಯಾರ ಹೆಸರು ಮುನ್ನಲೆಗೆ:

ಇದುವರೆವಿಗೂ ದಸರೆ ಉದ್ಘಾಟನೆಗೆ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಆದ್ಯಾತ್ಮಿಕ, ಪ್ರಗತಿಪರ ಹಾಗೂ ರೈತಾಪಿ ಕ್ಷೇತ್ರ ದಿಂದಲೂ ಉದ್ಘಾಟಕರ ಹೆಸರು ಆಯ್ಕೆ ಮಾಡಲಾಗಿದೆ. ಇಂತಹ ಹಿನ್ನೆಲೆಯಲ್ಲಿ ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(ರಾಜಕೀಯ ಕ್ಷೇತ್ರ), ನಟ ರಜನಿಕಾಂತ್(ನಟನಾ ಕ್ಷೇತ್ರ) ನಟ ಕಮಲ ಹಾಸನ್ (ನಟನ ಕ್ಷೇತ್ರ), ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ (ಧಾರ್ಮಿಕ ಕ್ಷೇತ್ರ), ಎಸ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನಾಥ್ಯ( ರಾಜಕೀಯ), ಶ್ರೀ ಸಿದ್ಧಗಂಗಾ ಮಠದ ಕಿರಿಯ ಶ್ರೀ( ಆದ್ಯಾತ್ಮ), ಜಗ್ಗಿವಾಸುದೇವ್( ಧಾರ್ಮಿಕ), ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ(ಧಾರ್ಮಿಕ), ಗಣಪತಿ ಆಶ್ರಮದ ಸಚ್ಚಿದಾನಂದ ಸ್ವಾಮೀಜಿ ( ಧಾರ್ಮಿಕ ಹಾಗೂ ಸಾಮಾಜಿಕ) ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗಡೆ( ವೈದ್ಯಕೀಯ ಕ್ಷೇತ್ರ), ಸನ್ನಿಲಿಯೋನಾ( ಚಲನಚಿತ್ರ ನಟಿ), ಜೋಗತಿ ಮಂಜಮ್ಮ( ಜಾನಪದ ಕಲಾವಿದೆ), ಅಂಬಾನಿ( ಉದ್ಯಮಿ), ಅದಾನಿ(ಉದ್ಯಮಿ) ಮೊದಲಾದವರ ದೊಡ್ಡ ಪಟ್ಟಿಯೇ ಇದೆ. ಹೀಗಾಗಿ ಯಾರ ಆಯ್ಕೆ ಸೂಕ್ತ ಎಂಬ ನಿಟ್ಟಿನಲ್ಲಿ ಸರ್ಕಾರ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಅಂತಿಮ ಹೆಸರನ್ನು ಮುಖ್ಯಮಂತ್ರಿ ಹಾಗೂ ದಸರಾ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೂ ಆಗಿರುವ ಬಸವರಾಜ ಬೊಮ್ಮಾಯಿ ಘೋಷಿಸಲಿದ್ದಾರೆ.

ಬಿಜೆಪಿಗೆ ಚುನಾವಣಾ ವರ್ಷ ಆಗಿರುವುದರಿಂದ ಈಗಾಗಲೇ ಕೇಂದ್ರ ಸರ್ಕಾರ ಅಜಾದಿ ಕಾ‌ ಅಮೃತ ಮಹೋತ್ಸವದ ಅಂಗವಾಗಿ ಎಲ್ಲೆಡೆ ಬಾವುಟ ಹಾರಿಸುವ ಸಂದೇಶ ಸಾರಿ ಎಲ್ಲರಲ್ಲೂ ದೇಶಾಭಿಮಾನ ಬೆಳೆಸಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಂತೆ ರಾಜ್ಯದಲ್ಲಿ ನಡೆಯುವ ನಾಡಹಬ್ಬ ದಸರೆ‌ ದೇಶ- ವಿದೇಶದ ಗಮನವನ್ನು ಸೆಳೆಯಲಿದೆ. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡು ಹೆಚ್ಚು ಜನರ ಗಮನ ಸೆಳೆಯುವ ದಿಸೆಯಲ್ಲಿ ದಸರಾ ಕೇಂದ್ರಿಕರಿಸಿದಂತೆ ಸರ್ಕಾರದ ಸಾಧನೆ ತೋರಬೇಕಿದೆ.

ಗಣ್ಯರ ಸಲಹೆಗಳಿವು…

ಎಚ್ ಡಿಡಿ ಆಯ್ಕೆ ಮಾಡಿ
ರಾಜ್ಯದವರಾಗಿ ಪ್ರಧಾನಿ ಹುದ್ದೆಗೇರಿದವರಾದ ಎಚ್.ಡಿ.ದೇವೇಗೌಡ ರು ಪಕ್ಷಾತೀತ ನಾಯಕರಾಗಿದ್ದಾರೆ‌. 50 ವರ್ಷಕ್ಕಿಂತ ಹೆಚ್ಚಿನ ಕಾಲ ಹಾಗೂ ಪ್ರಸ್ತುತ ವೂ ರಾಜಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅವರ ಜೀವನದ ಸಂದ್ಯಾಕಾಲದಲ್ಲಿ ಅವರಿಗೆ ದಸರಾ ಉದ್ಘಾಟಕರಾಗಿ ಮಾಡಿ ಗೌರವ ಸಲ್ಲಿಸುವ ಕೆಲಸ ಮಾಡಲಿ.

  • ವಿಶ್ವನಾಥ್, ವಿಧಾನಪರಿಷತ್ ಸದಸ್ಯ

ರಜನಿಕಾಂತ್ ಕರೆಸಿ
ರಾಜ್ಯದವರೇ ಆಗಿ ತಮಿಳುನಾಡಿನಲ್ಲಿ ಹೆಚ್ಚು ಪ್ರಚಲಿತರಾಗಿ ಪಂಚ ಭಾಷ ನಟರೆನಿಸಿಕೊಂಡಿರುವ ನಟ ರಜನಿಕಾಂತ್ ಅವರನ್ನು ಆಹ್ವಾನಿಸಿದರೆ ದಸರಾ ಪ್ರವಾಸೋದ್ಯಮಕ್ಕೆ ಹೆಚ್ಚು ಮೆರುಗು ಪಡೆಯಲಿದೆ. ಹೀಗಾಗಿ ಅಂತಹ ನಾಯಕರನ್ನು ಉದ್ಘಾಟಕರನ್ನಾಗಿ ಮಾಡಿ.

  • ಕೌಟಿಲ್ಯ ರಘು, ಅಧ್ಯಕ್ಷ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ

ಮಾಜಿ ಎಚ್.ಡಿ.ದೇವೇಗೌಡ, ನಟ ರಜನಿಕಾಂತ್ ಹಾಗೂ ಸಂಗೀತ ಕ್ಷೇತ್ರದ ಇಳಯರಾಜ ಈ ಮೂವರಲ್ಲಿ ಯಾರನ್ನೂ ಆಯ್ಕೆ ಮಾಡಿದರೂ ಉತ್ತಮವೇ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳುವಾಗ ಎಲ್ಲರ ಸಲಹೆ ಪಡೆದು ನಿರ್ಧಾರ ಕೈಗೊಳ್ಳಲಿ.

  • ನಾರಾಯಣಗೌಡ, ಅಧ್ಯಕ್ಷ ಹೋಟೆಲ್ ಮಾಲೀಕರ ಸಂಘ.

ಈ ಬಾರಿಯ ದಸರಾ ಉದ್ಘಾಟಕರ ಹೆಸರಿನ ಆಯ್ಕೆಯನ್ನು ಮಾಡುವ ಸರ್ವಾಧಿಕಾರವನ್ನು ದಸರಾ ಉನ್ಬತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ನೀಡಲಾಗಿದೆ.ಅವರೇ ಅಂತಿಮ ತೀರ್ಮಾನ ಮಾಡಲಿದ್ದಾರೆ.

ಎಸ್.ಟಿ.ಸೋಮಶೇಖರ್
ಉಸ್ತುವಾರಿ ಸಚಿವರು
ಮೈಸೂರು ಜಿಲ್ಲೆ

ಯಾರಿಂದ ಎಷ್ಟೆಷ್ಟು ಲಾಭ!?
ಗಣ್ಯರ ಆಯ್ಕೆಯಲ್ಲಿ ಯಾರಿಂದ ಎಷ್ಟೆಷ್ಟು ಲಾಭ ಎಂಬ ಚರ್ಚೆ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡರಿಗೆ ಸಂದ್ಯಾಕಾಲದಲ್ಲಿ ಇಂತಹದೊಂದು ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಜತೆಗೆ ಸ್ನೇಹ ಬೆಳೆಸಲು ಸೇತುವೆ ಆಗಲಿದೆ. ಜತೆಗೆ ಹಳೆ ಮೈಸೂರು ಭಾಗದಲ್ಲಿ ದೇವೇಗೌಡರ ಅಭಿಮಾನಿಗಳನ್ನು ಖುಷಿ ಪಡಿಸಿದಂತಾಗಿ ಒಕ್ಕಲಿಗರ ಮತ ಸೆಳೆಯಲು ಅನೂಕೂಲವಾಗಲಿದೆ. ಇನ್ನೂ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳ ಆಯ್ಕೆ ಮಾಡುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಮತ್ತಷ್ಟು ವೃದ್ಧಿಯಾಗುವ ಜತೆಗೆ ಲಿಂಗಾಯಿತ ಸಮುದಾಯದ ಮತ ಯಡಿಯೂರಪ್ಪನವರ ಹಿಂದೆ ಸರಿಸಿದ ಲೋಪದಿಂದ ಮುಕ್ತ ವಾಗಲಿದೆ. ಇನ್ನೂ ಪಂಚ ಭಾಷಾ ನಟ ರಜನಿಕಾಂತ್ ಆಗಮನದಿಂದ ಹೆಚ್ಚು ಪ್ರಚಾರ ಸಿಗುವ ಜತೆಗೆ ಮುಂಬರುವ ರಾಜಕೀಯ ಸನ್ಮಿವೇಶದಲ್ಲಿ ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನಕ್ಕೂ ಸೇತುವೆ ಆಗಲಿದೆ ಹೀಗಾಗಿ ಮೇಲಿನ ಎಲ್ಲರ ಮೇಲೂ ಒಂದಿಲ್ಲೊಂದು ಲೆಕ್ಕಾಚಾರದ ಚರ್ಚೆ ನಡೆಯುತ್ತಿದ್ದು, ಅಂತಿಮವಾಗಿ ಸರ್ಕಾರದಿಂದ ಯಾರನ್ನೂ ಆಯ್ಕೆ ಮಾಡಲಿದ್ದಾರೆಂಬ ಬಿಸಿ ಬಿಸಿ ಚರ್ಚೆ ಸಹ ಶುರುವಾಗಿರುವುದು ಈ ಬಾರಿ ದಸರಾ ವಿಶೇಷ.

ವರದಿ ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *