ನವದೆಹಲಿ: ವನಿತ ಏಷ್ಯಾ ಕಪ್ ಟಿ20 ಪಂದ್ಯವಳಿಯ ನಾಯಕಿ ಹಮ೯ನ್ ಪ್ರೀತ್ ಕೌರ್.

ಬಾಂಗ್ಲಾದೇಶದಲ್ಲಿ ಅ.1 ರಿಂದ 15ರ ತನಕ ನಡೆಯಲಿರುವ ಏಷ್ಯಾ ಕಪ್ ಟಿ20 ಪಂದ್ಯವಳಿಗಾಗಿ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ.
ಹಮ೯ನ್ ಪ್ರೀತ್ ಕೌರ್ ನೇತೃತ್ವದ ಈ ತಂಡದಲ್ಲಿ ಗಮನಾಹ೯ ಬದಲಾವಣೆಯೇನೂ ಕಂಡುಬಂದಿಲ್ಲ. ಇಂಗ್ಲೆಂಡ್ ವಿರುದ್ದದ ಟಿ20 ಸರಣಿಗಾಗಿ ಆಯ್ದ ಬಳಗವನ್ನೇ ಉಳಿಸಿಕೊಳ್ಳಲಾಗಿದೆ.
ತನಿಯಾ ಭಾಟಿಯಾ ಮತ್ತು ಸಿಮ್ರಾನ್ ದಿಲ್ ಬಹಾದೂರ್ ಮೀಸಲು ಆಟಗಾತಿ೯ಯರ ಯಾದಿಯಲ್ಲಿದ್ದಾರೆ. ಇದು 7 ತಂಡಗಳ ನಡುವಿನ ರೌಂಡ್ ರಾಬಿನ್ ಲೀಗ್ ಮುಖಾಮುಖಿ. 6 ಬಾರಿಯ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ಅ.1 ರಂದು ಶ್ರೀಲಂಕಾ ವಿರುದ್ಧ ಆಡಲಿದೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



