ಸಾಗರದಲ್ಲಿ ನಾಗರೀಕ ಬಂದೂಕು ತರಬೇತಿ 2024

ಸಾಗರದಲ್ಲಿ ನಾಗರೀಕ ಬಂದೂಕು ತರಬೇತಿ 2024

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸಾಗರದಲ್ಲಿ ದಿನಾಂಕ 12-01-2024 ರಿಂದ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಿದ್ದು, ಈ ದಿನ ದಿನಾಂಕಃ 20-01-2024 ರಂದು ಸಾಗರ ನಗರದ ಎಲ್ ಬಿ ಕಾಲೇಜು ಸಭಾಂಗಣದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿರುತ್ತದೆ. ಸದರಿ ಕಾರ್ಯಕ್ರಮದಲ್ಲಿ ಶ್ರೀ ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ನಾಗರೀಕ ಬಂದೂಕು ತರಬೇತಿ ಶಿಬಿರದಲ್ಲಿ ತರಬೇತಿ ಪೂರ್ಣಗೊಳಿಸಿದ ಒಟ್ಟು 310 ಜನ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿ, ಕಾರ್ಯಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿದರು.

1) ಪೊಲೀಸ್ ಇಲಾಖೆಯೂ ಸಮಾಜದ ಒಂದು ಭಾಗವೇ ಆಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಯಾರು ಹೆಚ್ಚಿನ ಒಡನಾಟವನ್ನು ಹೊಂದಿರುತ್ತಾರೋ ಅವರಿಗೆ ಇಲಾಖೆಯ ಮೇಲೆ ಒಳ್ಳೆಯ ಅಭಿಪ್ರಾಯವಿರುತ್ತದೆ. ಪೊಲೀಸ್ ಇಲಾಖೆಯು ಸದಾ ಕಾಲ ಸಾರ್ವಜನಿಕರ ಸೇವೆಗಾಗಿ ಮುಡಿಪಾಗಿದ್ದು, ಸರ್ಕಾರವು ಜಾರಿಗೆ ತರುವ ಕಾಯ್ದೆ, ಕಾನೂನುಗಳು ಮತ್ತು ಆದೇಶಗಳನ್ನು ಕಾರ್ಯರೂಪಕ್ಕೆ ತರುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿರುತ್ತದೆ. ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

2) ನಾಗರೀಕ ಬಂದೂಕು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ನಿಮಗೆ ಪೊಲೀಸ್ ಇಲಾಖೆಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯವನ್ನು ಇತರರಿಗೂ ಸಹಾ ತಿಳಿಸಿದ್ದಲ್ಲಿ, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಭಾವನೆಯು ಸಾರ್ವಜನಿರಲ್ಲಿ ಬೆಳೆಯುತ್ತದೆ.

3) ಈ ಹಿಂದೆ ನಾಗರೀಕ ಬಂದೂಕು ತರಬೇತಿ ಪಡೆದವರು ಗಣೇಶ ಬಂದೋಬಸ್ತ್, ಈದ್ ಮಿಲಾದ್ ಮತ್ತು ಇತರೆ ಪ್ರಮುಖ ಬಂದೋಬಸ್ತ್ ಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಉತ್ತಮ ಕಾರ್ಯ ನಿರ್ವಹಿಸಿದ್ದು, ನೀವುಗಳು ಸಹಾ ಇದೇ ರೀತಿ ಪೊಲೀಸ್ ಇಲಾಖೆಗೆ ಸಹಕರಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಿ.

4) ಅಧಿಕಾರ ಹೆಚ್ಚಾದಂತೆ ಹೊಣೆಗಾರಿಕೆಯೂ ಸಹಾ ಹೆಚ್ಚುತ್ತದೆ. ಆಯುಧಗಳಿಗೆ ಯಾವುದೇ ಬುದ್ದಿ ಶಕ್ತಿ ಇರುವುದಿಲ್ಲ, ಆದ್ದರಿಂದ ಮುಂದೆ ಆಯುಧಗಳನ್ನು ಬಳಸುವಾಗ ಜವಾಬ್ದಾರಿಯಿಂದ ಮತ್ತು ತರಬೇತಿಯಲ್ಲಿ ಕಲಿಸಿದಂತಹ ಶಿಸ್ತನ್ನು ಪಾಲಿಸಿ ಕ್ರಮಬದ್ದವಾಗಿ ಆಯುಧಗಳನ್ನು ಬಳಸಿ. ಒಂದು ವೇಳೆ ಆಯುಧಗಳನ್ನು ಬೇಜವಾಬ್ದಾರಿತನದಿಂದ ಮತ್ತು ಅಪಾಯಕಾರಿಯಾಗಿ ಬಳಕೆ ಮಾಡಿದರೇ, ಅಫಘಾತವಾಗುವ ಮತ್ತು ಜೀವ ಹಾನಿಯಾಗುವ ಸಂಭವವೂ ಸಹಾ ಹೆಚ್ಚಿರುತ್ತದೆ. ಆದ್ದರಿಂದ ನಿರ್ಲಕ್ಷತನಕ್ಕೆ ಅವಕಾಶ ನೀಡದೇ ಸುರಕ್ಷಿತವಾಗಿ ಆಯುಧಗಳನ್ನು ಬಳಸಿರಿ.

5) ಸಾಗರ ತಾಲ್ಲೂಕು ಭಾಗದಲ್ಲಿ ನಾಗರೀಕ ಬಂದೂಕು ತರಬೇತಿಯನ್ನು ಆಯೋಜನೆ ಮಾಡಲು ಸಾರ್ವಜನಿಕರಿಂದ ಹೆಚ್ಚಿನ ಕೋರಿಕೆ ಬಂದ ಮೇರೆಗೆ ಪೊಲೀಸ್ ಇಲಾಖೆಯಿಂದ ತರಬೇತಿಯನ್ನು ಆಯೋಜನೆ ಮಾಡಿ ಒಟ್ಟು 310 ಜನ ಶಿಭಿರಾರ್ಥಿಗಳಿಗೆ ತರಬೇತಿಯನ್ನು ನೀಡಿಲಾಗಿರುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಸಹಾ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ನಾಗರೀಕ ಬಂದೂಕು ತರಬೇತಿ ಶೀಭಿರವನ್ನು ಆಯೋಜನೆ ಮಾಡಲಾಗುತ್ತದೆ.

6) ತರಬೇತಿಯಲ್ಲಿ ಭಾಗವಹಿಸಿದ ಶಿಭಿರಾರ್ಥಿಗಳ ವಾಟ್ಸ್ ಅಪ್ ಗ್ರೂಪ್ ಅನ್ನು ಸೃಜನೆ ಮಾಡಿದ್ದು, ಇದನ್ನು ಸಮಾಜಮುಖಿ ಕೆಲಸಕ್ಕಾಗಿ ಬಳಸಿ ಹಾಗೆಯೇ ನಿಮ್ಮ ಸುತ್ತಮುತ್ತಲು ನಡೆಯುವ ಅಕ್ರಮ ಮಧ್ಯ ಮಾರಾಟ, ಗಾಂಜಾ ಮಾರಾಟ, ಇಸ್ಪೀಟು ಜೂಜಾಟದಂತಹ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಮತ್ತು ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ.

7) ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಭಾಗ ಚಾಲಕರ ನಿರ್ಲಕ್ಷತನ, ಅತಿವೇಗ, ಅಜಾಗರೂಕತೆಯೇ ಕಾರಣವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಅಪಘಾತಕ್ಕೊಳಗಾಗುತ್ತಾರೆ ಹಾಗೂ ಅಪಘಾತವಾದಾಗ ಹೆಲ್ಮೆಟ್ ಧರಿಸದೇ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುತ್ತಾರೆ. ಆದ್ದರಿಂದ ಹತ್ತಿರದ ಪ್ರಯಾಣಕ್ಕೆ ಹೆಲ್ ಮೆಟ್ ಬೇಡವೆಂದು ನಿರ್ಲಕ್ಷತನ ತೋರದೇ ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಪೂರ್ಣ ಹೆಲ್ ಮೆಟ್ ಧರಿಸಿ.

ಎಲ್ಲರ ಜೀವವು ಅಮೂಲ್ಯವಾಗಿದ್ದು ಇದನ್ನು ಕಳೆದುಕೊಳ್ಳಬೇಡಿ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ, ಶ್ರೀ ಗೋಪಾಲ ಕೃಷ್ಣ ಟಿ ನಾಯಕ್, ಪೊಲೀಸ್ ಉಪಾಧೀಕ್ಷಕರು, ಸಾಗರ ಉಪ ವಿಭಾಗ, ಶ್ರೀ ಸೀತಾರಾಂ ಪಿಐ ಸಾಗರ ಟೌನ್ ಪೊಲೀಸ್ ಠಾಣೆ ಮತ್ತು ನಾಗರೀಕ ಬಂದೂಕು ತರಬೇತಿ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು

ವರದಿ: ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *