ಚಿತ್ತೂರು: ಚಿತ್ತೂರಿನಲ್ಲಿ ಅಗ್ನಿ ಅವಘಡ ಮೂವರು ಸಜೀವ ದಹನ.

ಮಂಗಳವಾರ ಮಧ್ಯರಾತ್ರಿ ಚಿತ್ತೂರಿ ರಂಗಾಚಾರಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿದೆ.
ನೆಲಮಹಡಿಯಲ್ಲಿ ಪೇಪರ್ ಪ್ಲೇಟ ತಯಾರಿಕಾ ಘಟಕ ನೆಡೆಯುತ್ತಿದ್ದು, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬ ವಾಸವಿದೆ. ಪೇಪರ್ ಪ್ಲೇಟ ತಯಾರಿಕಾ ಘಟಕಕ್ಕೆ ತಗುಲಿದ ಬೆಂಕಿ ಕೆಲವೇ ಕ್ಷಣಗಳಲ್ಲಿ ಎರಡನೇ ಮಹಡಿಗೂ ವ್ಯಾಪಿಸಿ ಎರಡೂ ಮಹಡಿಗಳೂ ಅಗ್ನಿ ದುರಂತಕ್ಕೆ ಧಗಧಗನೆ ಉರಿದು ಹೊಗಿವೆ.
ಈ ದುರಂತದಲ್ಲಿ ಮೂವರು ಸ್ಥಳದಲ್ಲಿಯೆ ಸಜೀವ ದಹನವಾಗಿದ್ದಾರೆ. ಮೃತಪಟ್ಟವರಲ್ಲಿ ತಂದೆ ಮತ್ತು ಮಗ ಭಸ್ಕರ (65) , ದಿಲ್ಲಿ ಬಾಬು (35), ಮತ್ತು ಇನ್ನೊಬ್ಬ ಬಾಲಾಜಿ(25) ಎಂದು ಸ್ಥಳಿಯರು ಗುರುತಿಸಿದ್ದಾರೆ.
ಬೆಂಕಿ ತೀವ್ರವಾಗಿ ವ್ಯಾಪಿಸುತ್ತಿದಂತೆ, ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬೆಂಕಿ ಅನಾಹುತಕ್ಕೆ ಶಾಟ್೯ ಸಕ್ಯೂ೯ಟ್ ಕಾರಣ ಎನ್ನಲಾಗಿದೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555



