ಪಿರಿಯಾಪಟ್ಟಣ : ವಿದ್ಯಾರ್ಥಿಗಳಿಗೆ ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ನೋಟ್ ಬುಕ್ ಹಾಗೂ ಪೆನ್ ವಿತರಣೆ.
ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿದ್ಯಾರ್ಥಿಗಳಿಗೆ ದರ್ಶನ್ ಅಭಿಮಾನಿಗಳ ಸಂಘದ ವತಿಯಿಂದ ನೋಟ್ ಬುಕ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಶರತ್ ಕುಮಾರ್ ಸಿನಿಮಾ ನಟರಗಳ ಚಿತ್ರಗಳು ಬಿಡುಗಡೆಗೊಂಡಾಗ ಅದ್ದೂರಿಯಾಗಿ ಚಿತ್ರಮಂದಿರಗಳತ್ತ ಹಾಲಿನ ಅಭಿಷೇಕ ಹಾಗೂ ಬೇರೆ ಬೇರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿದ ಭೋಗನಹಳ್ಳಿ ಯುವಕರಿಗೆ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ಇದೇ ರೀತಿ ಪ್ರತಿಯೊಬ್ಬರೂ ಶಾಲಾ ಮಕ್ಕಳಿಗೆ ಉಪಯೋಗಕ್ಕೆ ಬರುವಂತ ವಸ್ತುಗಳನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ಹಾಗೂ ತಳಮಠದಿಂದ ಬಂದಂತ ನಾಯಕ ದರ್ಶನ್ ಬಾಲ್ಯದಿಂದಲೇ ಹಲವು ಕಷ್ಟಗಳನ್ನು ಕಂಡಿದ್ದರು ಈಗ ಕರ್ನಾಟಕದಲ್ಲಿ ನಂಬರ್ ಒನ್ ನಟನಾಗಿ ಬೆಳೆದು ನಿಂತಿದ್ದಾರೆ ಅವರ ಚಿತ್ರ ಕ್ರಾಂತಿ 100 ದಿನಗಳನ್ನು ಪೂರೈಸಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲೂ ಕೂಡ ಇಂಥ ಯುವಕರು ಶಾಲೆಗಳಿಗೆ ಬೇಕಾಗುವಂತ ಸೌಲಭ್ಯಗಳನ್ನು ನೀಡಿ ಶಾಲೆಯ ಏಳಿಗೆಗಾಗಿ ಶ್ರಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಿಗುವಂತ ಸೌಲತ್ತುಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೋಮೇಶ್ವರ ಕ್ರೀಡಾ ಸಂಸ್ಥೆಯ ಸಂಘದ ಅಧ್ಯಕ್ಷ ವಿನಯ್ ರಾಜ್, ಶಾಲೆಯ ಎಸ್ ಡಿ ಎಂ ಸಿ ಸದಸ್ಯರುಗಳಾದ ರಘು ಶಿವಶಂಕರ್, ರ್ದೇವೇಂದ್ರ ತಿಮ್ಮೇಗೌಡ, ಮನೋವರ, ನಿರ್ದೇಶಕ ಮಧುಸೂದನ್, ಯೋಗೇಶ್ ದರ್ಶನ್ ಅಭಿಮಾನಿಗಳ ಸಂಘದ ಸದಸ್ಯರುಗಳಾದ ಕೇಶವಮೂರ್ತಿ, ಮಂಜುನಾಥ್, ವಿತೇಶ್, ಕಾರ್ತಿಕ್, ಗಿರೀಶ್, ವೆಂಕಟೇಶ್, ಸುದೀಪ್, ರವಿ, ಶಾಲೆಯ ಶಾಲಾ ಶಿಕ್ಷಕರ ರಾಜು ಹಾಗೂ ಅಡಿಗೆ ಸಿಬ್ಬಂದಿಗಳು ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.
