ಆಟೋ ರಿಕ್ಷಾ ಬೆಂಕಿಗೆ ಆಹುತಿ : ತಪ್ಪಿದ ಅನಾಹುತ

ಸುಂಟಿಕೊಪ್ಪ : ಆಟೋ ರಿಕ್ಷಾ ಬೆಂಕಿಗೆ ಆಹುತಿ : ತಪ್ಪಿದ ಅನಾಹುತ.

ಆಟೋ ರಿಕ್ಷಾವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿವುಂಟಾಗಿ ದಹಿಸಿದ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಸುಂಟಿಕೊಪ್ಪದ ಆಟೋ ರಿಕ್ಷಾ ಚಾಲಕ ಶಿವರಾಜ್ ನೆನ್ನೆ ರಾತ್ರಿ 9 ಗಂಟೆಗೆ ಅಂದಗೋವೆಯಲ್ಲಿರುವ ಮನೆಗೆ ಮರಳುತ್ತಿದ್ದರು. ಮಾರ್ಗಮಧ್ಯದ ತಿಲಕ ಎಸ್ಟೇಟ್ ಬಳಿ ಚಾಲಕನ ಸೀಟ್ ಬಿಸಿಯಾಗಲಾರಂಭಿಸಿದೆ. ಕೆಳಗಿಳಿದು ನೋಡಿದಾಗ ಸೀಟ್ ಕೆಳಭಾಗದಲ್ಲಿರುವ ಇಂಜಿನ್ ನ ಸೆನ್ಸಾರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಜ್ವಾಲೆ ಹರಡಲಾರಂಭಿಸಿದೆ. ಇದರಿಂದ ಭಯಭೀತರಾದ ಶಿವರಾಜ್ ದೂರಕ್ಕೆ ಓಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಅಗ್ನಿಯ ಕೆನ್ನಾಲಿಗೆ ವ್ಯಾಪಿಸಿ ಆಟೋ ರಿಕ್ಷಾವನ್ನು ಆಹುತಿ ತೆಗೆದುಕೊಂಡಿದ್ದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *