ಕಾಶ್ಮೀರ: ಪಾಕಿಸ್ತಾನದ ಡ್ರೋನ್ ದಿಂದ ಬಿದ್ದಿದ್ದ ಶಸ್ತ್ರಾಸ್ತ್ರ ವಶ,

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಂತರಾಷ್ಟ್ರೀಯ ಗಡಿಯ ಸಮೀಪ ಇರುವ ಟೋಪ್ ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್ ದಿಂದ ಬಿದ್ದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಮತ್ತು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವರ್ಷ ಫೆಬ್ರವರಿ 24ರಂದು ಅರ್ನಿಯಾ ಪೊಲೀಸ್ ಠಾಣೆಯಲ್ಲಿ ಪಾಕಿಸ್ತಾನಿ ಡ್ರೋನ್ ಒಂದು ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಕೆಳಗೆ ಹಾಕಿತ್ತು, ಅದನ್ನು ಕೆಲವರು ತೆಗೆದುಕೊಂಡು ಪರಾಗಿದ್ದಾರೆ ,ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮುವಿಗೆ ಸೇರಿದ ಒಬ್ಬ ಆರೋಪಿಯು ಈ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದು, ಪಾಕಿಸ್ತಾನಿ ಹ್ಯಾಂಡ್ಲರ್ ಮೊಹಮ್ಮದ್ ಅಲಿ ಹುಸೇನ್ ಅಲಿಯಾಸ್ ಖಾಸಿಂ ಡ್ರೋನ್ ಹಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಮತ್ತು ಆತ ಲಷ್ಕರ್- ಎ- ತೈಬಾ ಮತ್ತು ಅಲ್ ಬದ್ರ ನ ಪ್ರಮುಖ ಕಾರ್ಯಕರ್ತ ಎಂದು ಬಹಿರಂಗ ಪಡಿಸಿದ್ದಾನೆ.
ನಿರಂತರ ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ಅರ್ನಿಯಾ ವೆಪನ್ ಡ್ರಾಪ್ ಪ್ರಕರಣದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ,ಮತ್ತು ಡ್ರೋನ್ ನಿಂದ ಬೀಳಿಸಿದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಅಡಗಿಸಿಟ್ಟಿರುವ ಎರಡು ಸ್ಥಳಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555



