ಆಂಟಿಬಯೋಟಿಕ್ಸ್ ಕೆಮ್ಮು, ಶೀತ, ಜ್ವರಕ್ಕೆ ತೆಗೆದುಕೊಳ್ಳಬೇಡಿ.

ಆಂಟಿಬಯೋಟಿಕ್ಸ್ ಕೆಮ್ಮು, ಜ್ವರ, ಶೀತಕ್ಕೆ ತೆಗೆದುಕೊಳ್ಳಬೇಡಿ ಎಂದು ಐ ಎಂ ಎ ಸಲಹೆ ನೀಡಿದೆ.

ಇದೀಗ ಹವಾಮಾನ ಬದಲಾವಣೆಯಾಗಿದ್ದು, ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ಈ ಬದಲಾದ ತಾಪಮಾನಕ್ಕೆ ನೆಗಡಿ, ಕೆಮ್ಮು, ಶೀತ, ಜ್ವರ ಬರುವುದು ಸಾಮಾನ್ಯವಾಗಿದೆ. ಇದಕ್ಕೆ ಆಸ್ಪತ್ರೆಗೆ ಹೋಗದೆ ಮೆಡಿಕಲ್ ಗೆ ತೆರಳಿ ಆಂಟಿಬಯೋಟಿಕ್ಸ್ ಪಡೆದು ಕುಡಿಯುವುದು ಕೂಡ ಸಾಮಾನ್ಯವಾಗಿದೆ. ಆದರೆ ಇದನ್ನು ಮಾಡಬೇಡಿ ಎಂದು ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಸಲಹೆ ನೀಡಿದ್ದಾರೆ. ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ ಗಾಗಿ ಐ ಎಮ್ಎ ಸ್ಥಾಯಿ ಸಮಿತಿಯು ಜನರು ಅನುಸರಿಸಲು ಮಾರ್ಗಸೂಚಿಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಂಟಿಬಯೋಟಿಕ್ಸ್ ಸೇವಿಸದಂತೆ ಹೇಳಲಾಗಿದೆ. ದೇಹದಲ್ಲಿ ಈಗಾಗಲೇ ಉತ್ತಮ ಬ್ಯಾಕ್ಟಿರಿಯಗಳು ಇರುತ್ತವೆ. ಈ ಬ್ಯಾಕ್ಟಿರಿಯಗಳು ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುತ್ತವೆ. ಆದರೆ ಹೆಚ್ಚು ಆಂಟಿಬಯೋಟಿಕ್ಸ್ ಸೇವನೆಯಿಂದ ಉತ್ತಮ ಬ್ಯಾಕ್ಟಿರಿಯಾಗಳ ಉಪಸ್ಥಿತಿಯನ್ನು ಕ್ರಮೇಣ ಕೊಲ್ಲುತ್ತದೆ ಎಂದಿದ್ದಾರೆ. ರಾಜ್ಯಕ್ಕೆ ಎಚ್3ಎಚ್ 2 ಕಲಿಟ್ಟಿದ್ದು, ಕೋವಿಡ್ ಸಮಯದಲ್ಲಿ ಎಷ್ಟು ಮುನ್ನೆಚ್ಚರಿಕೆ ಪಾಲಿಸುತ್ತಿದ್ದಿರೋ ಅಷ್ಟೇ ಮುನ್ನೆಚ್ಚರಿಕೆ ಈಗಲೂ ಇರಲಿ. ಐದು ದಿನಕ್ಕಿಂತ ಹೆಚ್ಚು ಕಾಲ ಸೊಂಕಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು ಎಂದು ಐ ಎಮ್ ಎ ಸಲಹೆ ನೀಡಿದೆ.

Leave a Reply

Your email address will not be published. Required fields are marked *