ಉಜೈನಿ ಪುರದ ಮಹಾಕಾಳೇಶ್ವರನ ಸುತ್ತಾ ಓಹೋ ಮೈ ಗಾಡ್ 2

ಅಕ್ಷಯ್ ಕುಮಾರ್, ಪಂಕಜ್ ತ್ರಿಪಾತಿ ಮತ್ತೆ ಯಾಮಿ ಗೌತಮ್ ಅಭಿನಯದ ಅಮಿತ್ ರೈ ನಿರ್ದೇಶಸುತ್ತಿರುವ ಓ ಮೈ ಗಾಡ್ 2 ಸಿನಿಮಾ ಇದೆ ಆಗಸ್ತ11 ರಂದು ದೇಶದ್ಯಾ0ದ್ಯತ ಬಿಡುಗಡೆಯಗಲಿದೆ. ಸಿನಿಮಾದ ಮೊದಲ ಅವ್ರುತಿ ಬಹಳ ದೊಡ್ಡ ಯಶಸ್ಸು ಕಂಡಿದ್ದು ತೆಲುಗು ಕನ್ನಡಕ್ಕೆ ರೀಮೇಕ್ ಸಹ ಆಗಿತ್ತು. ಕೃಷ್ಣನು ಹಾಗು ಸಾಮನ್ಯ ನಾಸ್ತಿಕನೊಬ್ಬನ ನಡುವೆ ನಡೆಯೋ ಸರಳ ಸಾಮಾಜಿಕ ಪ್ರಸಂಗವೆ ಸಿನಿಮಾದ ಕಥೆ. ಈ ಸಿನಿಮಾದಲ್ಲಿ ವೇದಾoತವು ಇತ್ತು ಪರಿಣಾಮ ಬೀರೋ ಸತ್ಯ ಭಕ್ತಿಯ ಉವಾಚವು ಇತ್ತು ನೀಲ ವರ್ಣನಾದ ಕೃಷ್ಣನ ನಂತರ ಇದೀಗ ಅದೇ ನೀಲ ವರ್ಣನಾದ ಈಶ್ವರನು ಭೂಮಿಗಿಳುದು ಹೊಸ ಅವತಾರದಲ್ಲಿ ಜ್ಞಾನೋಪದೇಶ ಮಾಡ್ತಾರೆ. ಪಂಕಜ್ ತ್ರಿಪಾತಿಯ ಪಾತ್ರ ತುಂಬಾನೇ ವಿಭಿನ್ನವಾದ ಮಿಡಲ್ ಕ್ಲಾಸ್ ವ್ಯಕ್ತಿಯದ್ದು.

ಖುದ್ದು ಅಕ್ಷಯ್ ಕುಮಾರ್ ಅವರೇ ಸಿನ್ಮಾಗೆ ನಿರ್ಮಾಪಕರು, ಸಿನಿಮಾದ ಕೆಲವು ದೃಶ್ಯಗಳ ಕುರಿತಾಗಿ ಚರ್ಚೆಗೆ ಕಾರಣವಾಗಿತ್ತು, ಶಿವನನ್ನ ವ್ಯಂಗ್ಯ ಮಾಡುವ ಅಥವಾ ಔಮರ್ಯಾದೆ ಕಾಣುವ ಸನ್ನಿವೇಶಗಳಿವೆ ಅದಕ್ಕೇ ಕತ್ತರಿ ಬಿದ್ರೇನೆ ರಿಲೀಸ್ ಆಗೋದಕ್ಕೆ ಅನುಮತಿ ನೀಡುತ್ತೀವಿ ಅಂತ ಸೆನ್ಸಾರ್ ಮಂಡಳಿ ಹೇಳಿತ್ತು, ಅದಕ್ಕೇ ಸಿನಿಮಾ ತಂಡವು ತುಸು ಬೇಸರದಿoದಲಿ ಹುಂ ಎಂದಿದ್ದಕ್ಕೆ 12 ಸೀನುಗಳು ಮಾಯವಾಗಿದೆ. ಅದೇನೇ ಆದ್ರೂ ಸಿನಿಮಾ 11ಕ್ಕೆ ತೆರೆಕಾಣಲಿದ್ದು ಪ್ರೇಕ್ಷಕನು ಸರಿ ತಪ್ಪುಗಳನ್ನು ನಿರ್ಧರಿಸುವ ಕೆಲಸ ಮಾಡ್ತಾನೆ.
ವರದಿ: P. ಘನಶ್ಯಾಮ್ – ಬೆಂಗಳೂರು


ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116


