ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿವೇಕ ಯಾತ್ರೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿವೇಕ ಯಾತ್ರೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಜಿಲ್ಲೆಯ ವತಿಯಿಂದ ವಿವೇಕ ಯಾತ್ರೆಯ ತಾಲೂಕು ಮಟ್ಟದ ಪ್ರಬಂಧ ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಸಾಗರ ತಾಲೂಕಿನ ವಿವಿಧ ಕಾಲೇಜುಗಳಿಂದ 55 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಸ್ತಾವಿಕದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಜಿಲ್ಲೆ ಸಹ ಪ್ರಮುಖರಾದ ವಿಷ್ಣು ಶರ್ಮರವರು ಮಾತನಾಡುತ್ತ , ಮಲೆನಾಡಿನ ಜನಜೀವನವನ್ನು ಸಾಹಿತ್ಯದ ಜಗತ್ತಿಗೆ ಪರಿಚಯಿಸಿದ ರಾಷ್ಟ್ರಕವಿ ಕುವೆಂಪು ಅವರು ವಾಲ್ಮೀಕಿ ರಾಮಾಯಣಕ್ಕು ರಾಮಾಯಣದರ್ಶನದ ಮೂಲಕ ಹೊಸಮೆರಗು ನೀಡಿದರು .‌ ಹಾಗೆಯೇ ಆ ಕಾಲದದಲ್ಲಿ ವಿವೇಕಾನಂದರು ಗುರುತಿಸಿದ ಸಮಾಜದ ಕೊರತೆಗಳು ಮತ್ತು ಅದರ ಪರಿಹಾರದ ಮಾರ್ಗೋಪಾಯಗಳನ್ನು ಅದೆ ತೀವ್ರತೆಯಲ್ಲಿ ಅರಿತು .. ವಿವೇಕಾನಂದರ ಚಿಂತನೆ ಮತ್ತು ವಿಚಾರಧಾರೆಗಳನ್ನು ಕನ್ನಡ ನಾಡಿಗೆ ಪರಿಚಯಿಸಿದವರು ನಮ್ಮ ಜಿಲ್ಲೆಯವರೆ ಆದ ರಾಷ್ಟ್ರಕವಿ ಕುವೆಂಪು ಅವರು ಎನ್ನುವುದು ನಮ್ಮ ಪಾಲಿನ ಹೆಮ್ಮೆ .. ಕುವೆಂಪು ಅವರ ಚಿಂತನೆಯಲ್ಲು ವಿವೇಕಾನಂದರ ವಿಚಾರಧಾರೆಗಳಿಂದ ಭಾರತವನ್ನು ಬದಲಾಯಿಸಬಹುದು ಎಂಬ ಬಲವಾದ ವಿಶ್ವಾಸವಿತ್ತು ಎಂಬುವುದು ಸತ್ಯ. ಮತ್ತು ಅದರ ನೇತೃತ್ವವನ್ನು ವಹಿಸಬೇಕಾಗಿದ್ದು ಯುವಪೀಳಿಗೆ ಎನ್ನುವ ಸ್ಪಷ್ಟತೆಯು ಸಹ ಕುವೆಂಪು ಅವರಿಗೆ ಇತ್ತು . ಹಾಗಾಗಿ ಯುವಮನಸ್ಸುಗಳ ಮನದಲ್ಲಿ ಅರಳಬೇಕಾದ ಭರವಸೆಯ ಭಾರತದ ಕಲ್ಪನೆಯನ್ನು ಅರಳಿಸಲು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು – ಕೃತಿ ಸರಣಿಗಳನ್ನು ಕನ್ನಡ ನಾಡಿಗೆ ಕುವೆಂಪು ಅವರು ತಮ್ಮ ಸಾಹಿತ್ಯ ಮತ್ತು ಭಾಷಣಗಳ ಮೂಲಕ ತಲುಪಿಸಿದರು ಬೆಂಗಳೂರು ವಿ.ವಿ ಯ ಹತ್ತನೇ ಘಟಿಕೋತ್ಸವದ ಅವರ ಮಾತಗಳನ್ನು ನೆನದರೆ ನಮಗು ಅರ್ಥವಾಗುತ್ತದೆ . ಇಂದಿನ ಪೀಳಿಗೆಗು ಅವರ ಅಂದಿನ ಭಾಷಣ ಪ್ರಸ್ತುತ ಎಂದನಿಸುತ್ತದೆ “ವಿಚಾರ ಕ್ರಾಂತಿಗೆ ಆಹ್ವಾನ” ಎಂಬ ಕೃತಿಯ ಮೂಲಕ ಇಂದಿಗು ಅದು ಲಭ್ಯವಿದೆ … ಕಳೆದ 75 ವರ್ಷಗಳಿಂದ ಭರವಸೆಯ ಭಾರತದ ಅದೆ ಕನಸ್ಸುಗಳನ್ನು ಭಾರತೀಯ ವಿದ್ಯಾರ್ಥಿ ಸಮೂಹದ ಮುಂದಿಟ್ಟು “ಜ್ಞಾನ ಶೀಲ ಏಕತೆ ” ಎಂಬ ಧ್ಯೇಯದೊಂದಿಗೆ ರಾಷ್ಟ್ರಕಾರ್ಯದಲ್ಲಿ ನಿರತವಾಗಿರುವ ಜಗತ್ತಿನ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಭಾವಿಪ ತನ್ನ ಏಳುವರೆ ದಶಕಗಳ ಪ್ರಯಾಣದಲ್ಲಿ ನೂರಾರು ಆಂದೋಲನಗಳಿಗೆ .. ವಿದ್ಯಾರ್ಥಿ ಚಳವಳಿಗಳಿಗೆ .. ಅವಶ್ಯಕತೆ ಇದ್ದಾಗ ಸಂಘರ್ಷಕ್ಕು ಹಿಂಜರಿಯದೆ ರಾಷ್ಟ್ರಹಿತಕ್ಕಾಗಿ ಮಿಡಿಯುತ್ತಾ.. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಒಂದು ಹೆಮ್ಮೆಯ ಇತಿಹಾಸ ಪರಿಷತ್ತಿಗೆ ಇದೆ .

ಶಿವಮೊಗ್ಗ ಜಿಲ್ಲೆಯ ಅಭಾವಿಪವೂ ಯುವಕರಲ್ಲಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಕನ್ನಡ ನಾಡಿಗೆ ಪರಿಚಯಿಸಿದ ರಾಷ್ಟ್ರಕವಿ ಕುವೆಂಪುರವರ ಆಶಯವನ್ನು ಯುವಮನಸ್ಸುಗಳಿಗೆ ತಲುಪಿಸಲು “ಕವಿಮನೆಯಲಿ ಯುವಸಮಾಗ” ಎಂಬ ಅಡಿಬರಹದೊಂದಿಗೆ ವಿವೇಕಯಾತ್ರೆಯನ್ನು
ಹಮ್ಮಿಕೊಂಡಿದೆ .. ಇಲ್ಲಿ ನಡೆಯುವ ಸ್ಪರ್ಧೆಗಳಿಗೆ ಮಾತ್ರ ಈ ವಿವೇಕಯಾತ್ರೆ ಸೀಮಿತವಾಗದೆ ನಮ್ಮ ವಿದ್ಯಾರ್ಥಿ ಜೀವನ ಸಾರ್ಥಕ ಆಗಲು ಸಾಹಿತ್ಯಾಸಕ್ತಿಯ ಕಡೆಗೆ ಹೊರಳೋಣ.. ಕವಿಮನದ ವಿಚಾರ ಕ್ರಾಂತಿಯ ಆಹ್ವಾನವನು ಸ್ವೀಕರಿಸೋಣ ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂ ಎಸ್ ಭಟ್ ಇತಿಹಾಸ ವಿಭಾಗದ ಮುಖ್ಯಸ್ಥರು L B ಕಾಲೇಜು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಕುವೆಂಪು ಅವರು ನಮ್ಮ ಕನ್ನಡ ನಾಡಿಗೆ ಪರಿಚಯಿಸುವುದರ ಮೂಲಕ ನಮ್ಮ ಭರವಸೆಯ ಭಾರತದ ಕಲ್ಪನೆಗೆ ನೇತೃತ್ವವನ್ನು ವಹಿಸಬೇಕಾದದ್ದು ಯುವ ಪೀಳಿಗೆ ಎಂದು ಹೇಳಿದರು ಕುವೆಂಪು ಅವರು ಸ್ವಾಮಿವಿವೇಕಾನಂದ ಜೀವನ ಚರಿತ್ರೆ ಮತ್ತು ಇತರ ಚಿಂತನ ಕೃತಿಗಳನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಪರಿಚಯಿಸುವುದರ ಮೂಲಕ ಕನ್ನಡ ನಾಡಿನ ಮಕ್ಕಳನ್ನು ವಿವೇಕಾನಂದರು ಕನಸು ಕಂಡ ಸಿಡಿಲಮರಿಗಳ್ಳನ್ನಾಗಿಸುವುದಕ್ಕೆ ತಮ್ಮ ಸಾಹಿತ್ಯರಾಶಿಯನ್ನು ಧಾರೆ ಎರೆದವರು ರಾಷ್ಟ್ರಕವಿ ಕುವೆಂಪು ಎಂದು ಅಭಿಪ್ರಾಯಪಟ್ಟರು . ಸ್ಪರ್ಧೆಗೆ ತೀರ್ಪುಗಾರರಾಗಿ L B ಕಾಲೇಜಿನ ಪ್ರಾಧ್ಯಾಪಕರಾದ ವಿನಯ್,ರಾಘವೇಂದ್ರ,ನವೀನ್, ಗ ಜೇಂದ್ರ,ಸುಷ್ಮಾ ಹಾಗೂ ಶುಭ ಇದ್ದರು. ಕಾರ್ಯಕ್ರಮವು ಅಭಾವಿಪ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಧನ್ಯಶ್ರಿ ಮತ್ತು ಆ ಭಾ ವಿ ಪ ಸಾಗರ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಿತು. ವಿವೇಕಯಾತ್ರೆಯ ಜಿಲ್ಲಾ ಮಟ್ಟದ ಸ್ಪರ್ಧೆಗಳು ಜನವರಿ 03 ರಂದು ಕುಪ್ಪಳಿಯಲ್ಲಿ ನಡೆಯಲಿದೆ .

ವರದಿ:ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *