ಮೈಸೂರು : ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗುತ್ತಿರುವ ಬಗ್ಗೆ ಹಾಗೂ ದಂಧೆ ನಡೆಸುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ಜಾಕೀರ್ ಹುಸೇನ್ ಪೋಲಿಸ್ ಆಯುಕ್ತರಾದ ರಮೇಶ್ ರವರಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶಾಲಾಕಾಲೇಜಿನ ವಿದ್ಯಾರ್ಥಿಗಳಿಗೆ ,ಕೆಲವು ಕಿಡಿಗೇಡಿಗಳು ಮಾದಕ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿ ಮಾಡುವ ದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಮುಂದಿನ ಭವಿಷ್ಯದ ವಾರಸುದಾರರಾದ ಯುವ ಪೀಳಿಗೆಗಳಿಗೆ ಗಾಂಜ, ಅಫೀಮ್ ನಂತಹ ನಶೆ ಹತ್ತಿಸುವ ಕೃತ್ಯ ನಡೆಯುತ್ತಿದ್ದು, ಅವರಲ್ಲಿರುವ ಕ್ರಿಯಾಶೀಲತೆಯನ್ನು ಕಳೆದುಕೊಂಡು ಜಗತ್ತಿನ ಪರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಶ್ರೀಮಂತ ಮನೆತನದ ವಿದ್ಯಾರ್ಥಿಗಳ ಹಾದಿಯಾಗಿ ಈ ರೀತಿಯ ಹೀನ ಕೃತ್ಯಗಳು ಬಡ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೂ ತಲುಪಿಸುವ ಷಡ್ಯಂತ್ರ ನಡೆಯುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಇಡೀ ವಿಶ್ವದಲ್ಲಿ ಪ್ರವಾಸ ಮತ್ತು ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದು, ದೇಶ ವಿದೇಶಗಳಿಂದ ರಾಜ್ಯ ಹೊರರಾಜ್ಯಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬಂದು ನೆಲೆಸಿರುವುದು ಸಂತಸದ ಸಂಗತಿ. ಆದರೆ ಕೆಲವು ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಮಾದಕವಸ್ತುಗಳ ಮಾರಾಟ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮುಖಾಂತರ ಜಗತ್ಜಾಹೀರಾಗಿದ್ದು ಇದಕ್ಕೆ ಬಲಿಯಾಗುತ್ತಿರುವ ಅಮಾಯಕ ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಸದೃಢಗೊಳ್ಳಬೇಕಿದೆ. ಜಾಗೃತರಾಗಬೇಕಿದೆ. ಮೈಸೂರಿನ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಶಾಂತಿ ಪಾಲನೆ ನೆಮ್ಮದಿಯ ಬದುಕು ಅದರಲ್ಲೂ ವಿಶೇಷವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವತ್ತ ರೌಡಿಗಳನ್ನು ಮಟ್ಟಹಾಕುವ ದಿಸೆಯಲ್ಲಿ ಬಹಳಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ಅದೇ ರೀತಿ ಶಾಲಾಕಾಲೇಜಿನ ಆವರಣದಲ್ಲಿ ಅಪ್ರಾಪ್ತ ರಿಗೆ ದ್ವಿಚಕ್ರವಾಹನ ಮೊಬೈಲ್ ಗೆ ಅವಕಾಶ ನೀಡದಂತೆ ಹಗೂ ಶಾಲಾ ಕಾಲೇಜಿನ ಸುತ್ತಮುತ್ತಲು ಸಿಗರೇಟ್ ವ್ಯಾಪಾರ ಸ್ಥಗಿತಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತೆ ಮಾಡುವುದು ಪ್ರಮುಖ ಕರ್ತವ್ಯವಾಗಿರುತ್ತದೆ. ಈ ರೀತಿಯ ಅಮಾನವೀಯ ಕೃತ್ಯವನ್ನು (ದಂಧೆಯನ್ನು) ನಡೆಸುತ್ತಿರುವ ನೀಚರನ್ನು ಬಂಧಿಸಿ ಇದರಲ್ಲಿ ಭಾಗಿಯಾಗಿರುವ ಯುವಸಮುದಾಯವನ್ನು ಎಚ್ಚರಿಸಿ ಪೊಲೀಸ್ ಇಲಾಖೆಯು ಗುರುತರವಾದ ಜವಾಬ್ದಾರಿಯನ್ನು ಇನ್ನಷ್ಟು ಚುರುಕುಗೊಳಿಸಿ ತಮ್ಮ ಕಾರ್ಯವೈಖರಿಯನ್ನು ಪ್ರದರ್ಶಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು
ತಿಳಿಸಿದರು.
ಎಂ. ಚಂದ್ರಶೇಖರ್
ಗೌರವಧ್ಯಕ್ಷರು
ದೇವರಾಜ ಅರಸು ಪ್ರತಿಮೆ
ಪ್ರತಿಷ್ಠಾಪನ ಸಮಿತಿ, ಮೈಸೂರು.
ಶ್ರೀ ಪುರುಷೋತ್ತಮ್
ಮಾಜಿ ಮಹಾಪೌರರು
ಮೈಸೂರು ಮಹಾನಗರ ಪಾಲಿಕೆ
ಪ್ರಶಾಂತ್ ಆರ್ಯ
ರಾಜ್ಯ ಕಾರ್ಯದರ್ಶಿ
ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ
(ಎನ್.ಎಸ್.ಯು. ಐ )
ಕಮಲ ಅನಂತರಾಮು
ಪ್ರಧಾನ ಸಂಚಾಲಕರು
ದೇವರಾಜ ಅರಸು ಪ್ರತಿಮೆ
ಪ್ರತಿಷ್ಠಾಪನಾ ಸಮಿತಿ, ಮೈಸೂರು
ಅರವಿಂದ ಶರ್ಮ
ಪ್ರಧಾನ ಸಂಚಾಲಕರು
ದೇವರಾಜ ಅರಸು ಪ್ರತಿಮೆ
ಪ್ರತಿಷ್ಠಾಪನಾ ಸಮಿತಿ, ಮೈಸೂರು
ರದಿವುಲ್ಲ ಖಾನ್
ಪ್ರಧಾನ ಸಂಚಾಲಕರು
ದೇವರಾಜ ಅರಸು ಪ್ರತಿಮೆ
ಪ್ರತಿಷ್ಠಾಪನಾ ಸಮಿತಿ, ಮೈಸೂರು
ದ್ಯಾವಪ್ಪ ನಾಯ್ಕ
ಪ್ರಗತಿಪರ ಹೋರಾಟಗಾರರು, ಮೈಸೂರು
ಶಿವಪ್ಪ
ಸಮಾಜಪರ ಚಿಂತಕರು,
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

