ಕೆ ಆರ್ ಪೇಟೆ : ರೈತರ ಉಳಿವಿಗಾಗಿ ಜೆಡಿಎಸ್ ಪಕ್ಷಕ್ಕೆ ಮತನೀಡಿ – ಎ ಎನ್ ಜಾನಕಿರಾಮ್

ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಬೊಂಮೇಗೌಡ ಹೊಸಕೊಪ್ಪಲು ಗ್ರಾಮ ದೇವತೆ ಲಕ್ಷ್ಮಿದೇವಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು ರವರ ಜೊತೆಗೂಡಿ ಬೂಕನಕೆರೆ ಹೋಬಳಿಯ ಬೊಂಮೇಗೌಡನ ಕೊಪ್ಪಲು,ಮೋದುರು,ಬಿ ಬಾಚಹಳ್ಳಿ, ಕೀಳನಕೊಪ್ಪಲು,ವಿಜಯಹೊಸಹಳ್ಳಿ ಸೇರಿದಂತೆ ಹಲವಾರು ಗ್ರಾಮದ ಮತದಾರರ ಮನೆ ಮನೆ ಭೇಟಿ ನೀಡಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿರಾಮ್,ಜೆಡಿಎಸ್ ಪಕ್ಷ ಇಂದಿನಿಂದಲೂ ರೈತರ ಏಳಿಗೆಗೆ ದುಡಿದಿದೆ ಗ್ರಾಮೀಣದ ರೈತರು ಸದೃಢವಾಗಬೇಕೆಂದರೆ ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು , ಜೆಡಿಎಸ್ ಪಕ್ಷದ ಕನಸಿನ ಯೋಜನೆಗಳಾದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥಿತ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಆರೋಗ್ಯಕ್ಕೆ ಪಂಚಾಯಿತಿ ಹಂತದಲ್ಲಿ 30 ಹಾಸಿಗೆಯ ಉತ್ತಮ ಆಸ್ಪತ್ರೆ ಮತ್ತು ಬಡ ಜನತೆಯ ಸಂಪೂರ್ಣ ಆರೋಗ್ಯದ ಹೊಣೆಯ ಯೋಜನೆ, ರೈತಚೈತನ್ಯ, ಉದ್ಯೋಗ ಮತ್ತು ಮಹಿಳಾ ಸಬಲೀಕರಣ ಹಾಗೂ ಪ್ರತಿ ಬಡ ಕುಟುಂಬಕ್ಕೂ ವಸತಿ ಕಲ್ಪಿಸುವ ಪಂಚರತ್ನ ಯೋಜನೆಯ ಜಾರಿಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ ಟಿ ಮಂಜು ಅವರಿಗೆ ಮತ ಹಾಕುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರನ್ನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್ ರವರು ಕ್ಷೆತ್ರದ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಾ ತಮ್ಮ ಜೀವನವನ್ನೇ ಸಾರ್ವಜನಿಕರ ಬಲವರ್ತನೆಗೆ ಮುಡುಪಾಗಿಟ್ಟಿ, ಕೊರೋನ ಸಂಕಷ್ಟ ಸಮಯದಲ್ಲಿ ಬಡವರಿಗೆ ಕಿಟ್ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಪಕ್ಷದ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತಿರುವುದನ್ನು ಪರಿಗಣಿಸಿ ಯುವಕರಿಂದ ಜನಸೇವೆಗೆ ಹೆಚ್ಚಿನ ಕೆಲಸವಾಗುತ್ತದೆ ಎಂದು ಅರಿತು ಪಕ್ಷದ ವರಿಷ್ಠರು ನಮ್ಮ ತಾಲೂಕಿನಾ ಯುವನಾಯಕ ಎಚ್ ಟಿ ಮಂಜು ರವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಯಾವುದೇ ಗೊಂದಲಕ್ಕೆ ಆದ್ಯತೆ ಕೊಡದೆ ಅತಿ ಹೆಚ್ಚು ಮತಗಳ ಹಾಕುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್ ಟಿ ಮಂಜು,ಮಂಡ್ಯ ಜಿಲ್ಲಾ ಒಕ್ಕೂಟ ಮಾಜಿ ಅಧ್ಯಕ್ಷ ಎಂ ಬಿ ಹರೀಶ್,ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್,ತಾಲೂಕು ಕಾರ್ಯಾಧ್ಯಕ್ಷ ರಾಮಚಂದ್ರು,ಬೂಕನಕೆರೆ ಹೋಬಳಿ ಅಧ್ಯಕ್ಷ ನಂದೀಶ್,ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಹಿರಿಯ ಮುಖಂಡ ಹುಲ್ಲೆಗೌಡ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪೂವನಹಳ್ಳಿ ಗಾಯಿತ್ರಿ ರೇವಣ್ಣ,ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಧನಂಜಯ,ಬೂಕನಕೆರೆ ಹೋಬಳಿ ಯುವ ಜೆಡಿಎಸ್ ಅಧ್ಯಕ್ಷ ಮಂಜು,ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್,ಮಂಡ್ಯ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್,ಚೌಡೇನಹಳ್ಳಿ ನಾಗರಾಜು,ಹೆಚ್ ಟಿ ಲೋಕೇಶ್, ಬ್ಯಾಲದಕೆರೆ ನಂಜೇಗೌಡ,ಗ್ರಾ ಮಾ ಸದಸ್ಯ ಬೋಮೇಗೌಡ ಕೊಪ್ಪಲು ನಾಗೇಶ್, ಬೀರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಿರೇಗೌಡ,ಎಚ್ ಜಿ ಬಾಬು,ಯುವ ಮುಖಂಡ ಸಚಿನ್ ಕೃಷ್ಣ, ಕುಮಾರ ಪಡೆಯ ತಾಲೂಕು ಅಧ್ಯಕ್ಷ ಸಾಧುಗೋನಹಳ್ಳಿ ಲೋಕೇಶ್, ಪ್ರತಾಪ್,ಸೇರಿದಂತೆ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



