ಮೈಸೂರು: ಜಿಎಸ್ಎಸ್ ವತಿಯಿಂದ ಮನೆ ಮನೆ ನರ್ಸರಿ ಕಾರ್ಯಕ್ರಮ.
ಮೈಸೂರಿನಲ್ಲಿ ಇಂದು ಜಿಎಸ್ಎಸ್ ವತಿಯಿಂದ ಮನೆ ಮನೆ ನರ್ಸರಿ ಎಂಬ ಕಾರ್ಯಕ್ರಮವನ್ನು ಜಿಎಸ್ಎಸ್ ಯೋಗ ಕೇಂದ್ರದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀಹರಿಯವರು ಸಾಲುಮರದ ತಿಮ್ಮಕ್ಕನನ್ನು ನೆನೆಯುತ್ತ, ಆಮ್ಲಜನಕ ಮನುಷ್ಯನಿಗೆ ಎಷ್ಟು ಮುಖ್ಯ ಮುಂದೆ ಆಮ್ಲಜನಕದ ಸಿಲಿಂಡ್ರನ್ನು ಹೊತ್ತು ತಿರುಗುವ ಪರಿಸ್ಥಿತಿ ಬರುವುದು, ಅಂತಹ ಪರಿಸ್ಥಿತಿ ಬರಬಾರದೆಂದರೆ, ಸಸಿಗಳನ್ನು ಬೆಳಸಿ ಪೋಷಿಸಬೇಕು ಮತ್ತು ಮಕ್ಕಳಲ್ಲಿ ಪರಿಸರ ಪ್ರೇಮ, ಮರಗಳ ಬಗ್ಗೆ ಮಮತೆಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಡಾಕ್ಟರ್ ಲಕ್ಷ್ಮೀನಾರಾಯಣ ಶಣೈ
ತುಳಸಿ ಗಿಡ ಆಲದ ಮರ ಅಶೋಕ್ ವೃಕ್ಷ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ ಸಸಿಗಳನ್ನು ಕೊಡುವುದರ ಮುಖಾಂತರ ಮನೆಮನೆ ನರ್ಸರಿ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಸಸಿಗಳನ್ನು ಕೊಡುವುದಲ್ಲದೆ ಅದಕ್ಕೆ ಒಂದು ಹೆಸರಿಡುವಂತೆ ಸೂಚಿಸಿದರು ಆ ಸಸಿಯನ್ನು ಆರು ತಿಂಗಳ ಕಾಲ ತಮ್ಮ ಮನೆಗಳಲ್ಲಿ ಪೋಷಿಸಿ ನಂತರ ಅದನ್ನು ಹಿಂತಿರುಗಿಸುವಂತೆ ಸೂಚಿಸಿದರು.
ಸಸಿಗಳನ್ನು ಕೊಟ್ಟು ಸುಮ್ಮನಾಗದೆ, ಒಂದು ವೃಕ್ಷ ರಕ್ಷಕರ ತಂಡವನ್ನು ರಚಿಸಿ ಆ ತಂಡಕ್ಕೆ ಸಸಿಗಳ ಪೋಷಣೆಯ ಮೇಲ್ವಿಚಾರಣೆಯನ್ನು ವಹಿಸಿದ್ದಾರೆ.
ಪ್ರತಿ ತಿಂಗಳು ಕೊಟ್ಟಿರುವ ಸಸಿಗಳು ಉತ್ತಮವಾಗಿ ಪಾಲನೆ ಪೋಷಣೆ ಪಡೆಯುತ್ತಿದೆಯೇ ಎಂಬ ಮೇಲ್ವಿಚಾರಣೆಯನ್ನು ಮಾಡುವ ಕಾರ್ಯ ವೃಕ್ಷ ರಕ್ಷಕ ತಂಡ ನಿರ್ವಹಿಸುವುದು.
ಮೈಸೂರನ್ನು ಗ್ರೀನ್ ಸಿಟಿ ಮಾಡುವ ಸದುದ್ದೇಶ ಹೊಂದಿರುವ ಶ್ರೀಹರಿಯವರು ಮನೆ ಮನೆ ನರ್ಸರಿ ಎಂಬ ಕಾರ್ಯಕ್ರಮದ ಮುಖಾಂತರ ಮೈಸೂರಿನ ಜನತೆಯಲ್ಲಿ ಪರಿಸರ ಪ್ರೇಮ ಹಾಗೂ ಕಾಳಜಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಡಾಕ್ಟರ್ ಲಕ್ಷ್ಮೀನಾರಾಯಣ ಶಣೈ .ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರು.
ಜಿಎಸ್ಎಸ್ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಶ್ರೀಯುತ ಯೋಗತ್ಮ ಶ್ರೀಹರಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯೋಗಪಟುಗಳು ಹಾಗೂ ಸಾರ್ವಜನಿಕರು ಹಾಜರಾಗಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



