“ಪೊಲೀಸ್‌ ಆಯುಕ್ತ ಚಂದ್ರಗುಪ್ತರವರಿಗೆ ಸನ್ಮಾನ”

ಮೈಸೂರು : ಪೊಲೀಸ್‌ ಆಯುಕ್ತ ಚಂದ್ರಗುಪ್ತರವರಿಗೆ ಸನ್ಮಾನ.

ಮೈಸೂರು ದಸರಾ 2022ರ ಮೆರವಣಿಗೆ ಹಾಗೂ ಪಂಜಿನ ಕವಾಯತು ಸಮಿತಿಯಿಂದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ (ಪೈವಿಸ್ಟಾ) ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಸಮಿತಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಪೊಲೀಸ್‌ ಆಯುಕ್ತ ಚಂದ್ರಗುಪ್ತರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನವರಾತ್ರಿಯ 9 ದಿನಗಳ ಸಂದರ್ಭ ಹಗಲು-ರಾತ್ರಿ ಶ್ರಮಿಸಿದ ಎಲ್ಲಾ ಪೊಲೀಸ್ ಸಿಬ್ಬಂದಿಯ ಕರ್ತವ್ಯವನ್ನು ಶ್ಲಾಘಿಸಿ ಜನತೆಯ ಪರವಾಗಿ ಧನ್ಯವಾದ ಅರ್ಪಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೊಲೀಸ್ ಆಯುಕ್ತರಾದ ಚಂದ್ರಗುಪ್ತಾರವರು ದಸರಾದಲ್ಲಿ ಮೆರವಣಿಗೆ ಪ್ರಮುಖವಾದದ್ದು, ಅದು ಸುಸೂತ್ರವಾಗಿ ಯಶಸ್ವಿಯಾಗಿ ನಡೆಯಿತು. ಅದಕ್ಕಾಗಿ ಶ್ರಮಿಸಿದ
ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ಸಹಕಾರವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಗೋಪಾಲ್ ರಾಜೇ ಅರಸ್, ಬೋ.ಉಮೇಶ್, ಮಹೇಶ್ ಹಾಗೂ ಸದಸ್ಯರಾದ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಬಿ.ಸಿ.ಶಶಿಕಾಂತ್, ಕೆ.ಎಂ.ನಿಶಾಂತ್, ಜಯರಾಂ, ಜಗದೀಶ್, ಎಂ.ಆರ್.ಬಾಲಕೃಷ್ಣ, ಕಿಶೋರ್, ಪದ್ಮನಾಭ, ಶ್ರೀನಿವಾಸ್ ಪ್ರಸಾದ್, ಮಣಿರತ್ನ, ಸೋಮಶೇಖರ್, ಭರತ್ ಜೆಟ್ಟಿ, ಕೀರ್ತಿರಾಜ್, ನಗರಪಾಲಿಕೆ ಸದಸ್ಯರಾದ ಸುಬ್ಬಯ್ಯ ಸೇರಿದಂತೆ ಪೊಲೀಸ್ ಅಧಿಕಾರಿಗಳಾದ ಗೀತಾಪ್ರಸನ್ನ, ಶಶಿಧರ್, ಮಲ್ಲೇಶ್ ಇನ್ನಿತರರು ಹಾಜರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *