“ತಾನು ಬೆಳೆದ ಬೆಳೆಯಲ್ಲೇ ಎಣ್ಣೆ ತಯಾರು ಮಾಡಿ ಅಭಿವೃದ್ಧಿ ಕೈಗೊಂಡ ಯುವ ರೈತ ಪಾಂಡು”

ಮಂಡ್ಯ: ತಾನು ಬೆಳೆದ ಬೆಳೆಯಲ್ಲೇ ಎಣ್ಣೆ ತಯಾರು ಮಾಡಿ ಅಭಿವೃದ್ಧಿ ಕೈಗೊಂಡ ಯುವ ರೈತ ಪಾಂಡು.

ಹೌದು ಪಾಂಡು ಎಂಬ ಯುವ ರೈತನೊಬ್ಬ ಕಳೆದ ಮೂರು ವರ್ಷಗಳಿಂದ ಕಡಲ್ಲೇ ಬೀಜ, ಸೂರ್ಯಕಾಂತಿ ಬೆಳೆಗಳನ್ನು ತಾವೇ ಸ್ವತಃ ಬೆಳೆದ ಬೆಳೆಯಲ್ಲಿ ಎಣ್ಣೆ ತಾಯಾರು ಮಾಡಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು ಈಗಿನ ಯುವ ಪೀಳಿಗಿಗೆ ಮಾದರಿಯಾಗಿದ್ದಾರೆ..

ಮೂಲತ ಈತ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ‌ ಕಿಕ್ಕೇರಿ ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಶ್ರೀಮತಿ ಯಶೋದಮ್ಮ ಮಂಜೇಗೌಡರ ಪುತ್ರನಾದ ಪಾಂಡು ಎಂಬಾತ ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾಭ್ಯಾಸದ ಜೊತೆ ರೈತನಾಗಿ ಏನಾದ್ರು ಸಾದನೇ ಮಾಡಬೇಕು ಎಂದು ಕನಸ್ಸು ಕಂಡವನ್ನು ಅದೇ ರೀತಿ ತಮ್ಮ ತಂದೆ ಉಳಿಸಿಕೊಂಡ ಐದು ಎಕ್ಕರೆ ಜಮೀನಿನಲ್ಲೇ ಏನಾದ್ರು ಸಾದನೇ ಮಾಡಬೇಕು ಎಲ್ಲರಂತೆ ಬದುಕಬೇಕು ಎಂದು ಕನಸ್ಸು ಕಂಡವನು..

ತಮ್ಮಗಿದ್ದ ಸಲ್ಪ ಅನುಭದಲ್ಲಿ ಕಿಕ್ಕೇರಿ ಪಟ್ಟಣದ ಮಂದಗೆರೆ ರಸ್ತೆಯ ಎಸ್.ಬಿ.ಐ ಬ್ಯಾಕ್ ಎದುರು ಒಂದು ಚಿಕ್ಕ ಅಂಗಡಿಯನ್ನು ಬಾಡಿಗೆ ಪಡೆದು ಎಣ್ಣೆ ತಯಾರು ಮಾಡುವ ಯಂತ್ರವನ್ನು ಅಳವಡಿಕೆ ಮಾಡಿಕೊಂಡು ಎಣ್ಣೆ ತಯಾರು ಮಾಡುತ್ತಾ ಬಂದ್ರು..

ಮೊದಲಿಗೆ ಮಾರುಕಟ್ಟೆಯಿಂದ ಸೂರ್ಯಕಾಂತಿ ಬೀಜ, ಕಡಲೆ ಬೀಜ, ಕೊಬ್ಬರಿ, ಸಸಾವೆ,y ಹುಚ್ಚಳ್ಳು, ಬಾದಾಮಿ, ಎಳ್ಳು, ಕುಸುವೆ ಬೀಜಗಳನ್ನು ಖರೀದಿ ಮಾಡಿ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಾ ಇದ್ರು.. ಆದ್ರೆ ಮಾರುಕಟ್ಟೆಯಲ್ಲಿ ಹೆಚ್ಚು ಧರ ಇದ್ದಕಾರಣ ಇದನ್ನು ಅರಿತ ಪಾಂಡು ರವರು ತಾವೇ ಸ್ವತಃ ಸೂರ್ಯಕಾಂತಿ, ಕಡಲೇ ಯನ್ನು ಬೆಳೆದು ತಾವೇ ಎಣ್ಣೆ ತಯಾರು ಮಾಡಿ ರಿಯಾಯಿತಿ ಧರದಲ್ಲಿ ಮಾರಾಟ ಮಾಡಿY ಬದುಕು ಕಟ್ಟಿಕೊಂಡಿದ್ದಾರೆ..

ಅಲ್ಲದೆ ರೈತರು ನೇರವಾಗಿ ಕೊಬ್ಬರಿ, ಕಡೇಲೆ ಬೀಜಗಳನ್ನು ತಂದು ಕೊಟ್ಟು ಇಲ್ಲೇ ಇದ್ದು ಎಣ್ಣೆ ಮಾಡಿಸಿಕೊಂಡು ಹೋಗುವುರು ಉಂಟು..

ಒಟ್ಟಾರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಎಣ್ಣೆಯನ್ನು ಬಳಸದೆ ಈ ಎಣ್ಣೆಯನ್ನು ಉಪಯೋಗಿಸುವುದರಿಂದ ತಮ್ಮ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ನುರಿತವರು ಹೇಳುತ್ತಾರೆ…

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದರೆ ಯುವ ರೈತ ಪಾಂಡು ರವರನ್ನು ಸಂಪರ್ಕ ಮಾಡಬಹುದು ದೂರವಾಣಿ ಸಂಖ್ಯೆ 9113030952-9741210723.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *