“ಬುಮ್ರಾ ಬಳಿಕ ಗಾಯಗೊಂಡ ಮತ್ತೊಬ್ಬ ಆಟಗಾರ”

ಮುಂಬೈ: ಐ ಸಿ ಸಿ ಟಿ20 ವಿಶ್ವಕಪ್‌ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ರೋಹಿತ್‌ ಶಮಾ೯ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ತಲುಪಿದೆ.

ಏಷ್ಯಕಪ್‌ ನಂತೆ ಟಿ20 ವಿಶ್ವಕಪ್‌ ಗೂ ಗಾಯಾಳುಗಳ ಸಮಸ್ಯೆ ಕಾಡಿದೆ. ಏಷ್ಯಕಪ್‌ ನಲ್ಲಿ ಜಸ್ಟ್ರೀತ್‌ ಬುಮ್ರಾ ಮತ್ತು ಹಷ೯ಲ್‌ ಪಟೇಲ್‌ ಸೇವೆಯಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ ಇದೀಗ ವಿಶ್ವಕಪ್‌ ಗೂ ಬುಮ್ರಾರನ್ನು ಕಳೆದುಕೊಂಡಿದೆ.

ಆಸೀಸ್‌ ವಿರುದ್ಧ ಸರಣಿಯಲ್ಲಿ ಆಡಿದ್ದ ಬುಮ್ರಾ ಮತ್ತೆ ಗಾಯಗೊಂಡಿದ್ದು, ಪೂಣ೯ ವಿಶ್ವಕಪ್‌ ಗೆ ಲಭ್ಯವಿರುವುದಿಲ್ಲ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮೀಸಲು ತಂಡ ಏಕದಿನ ಸರಣಿ ಆಡುತ್ತಿದೆ. ಹರಿಣಗಳ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಬೌಲಿಂಗ್‌ ಮಾಡಿದ್ದ, ದೀಪಕ್‌ ಚಾಹರ್‌ ಮೊದಲ ಏಕದಿನ ಪಂದ್ಯದಲ್ಲಿ ಆಡಿರಲಿಲ್ಲ.

ಇದು ಹಲವು ಆಚ್ಚರಿಗೆ ಕಾರಣವಾಗಿತ್ತು, ಆದರೆ ಇದಕ್ಕೆ ಟೀಂ ಇಂಡಿಯಾ ಸ್ಪಷ್ಟನೆ ನೀಡಿದ್ದು. ಬಲಗೈ ವೇಗದ ಬೌಲರ್‌ ಚಾಹರ್‌ ಗಾಯಗೊಂಡಿದ್ದಾರೆ ಎಂದಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *