ಬೆಂಗಳೂರು: 231 ನೇ ದಿನದ ಐತಿಹಾಸಿಕ ಧರಣಿ ಸತ್ಯಾಗ್ರಹ.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ 231 ನೇ ದಿನದ ಐತಿಹಾಸಿಕ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಜ್ಞಾನಪ್ರಕಾಶ್ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ, ಜಗದ್ಗುರು ಬಸವಪ್ರಭು ಶ್ರೀ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ, ಸಮ್ಮುಖ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಹಾಗೂ ಮುಂದಿನ ಹೋರಾಟದ ರೂಪುರೇಷೆ ಕುರಿತು ಮಹತ್ವದ ಚರ್ಚೆ ನಡೆಸಿದರು.
ಹೊಸಕೋಟೆ, ದೊಡ್ಡಬಳ್ಳಾಪುರ, ಪಾವಗಡ, ಗುಂಡ್ಲುಪೇಟೆ, ರಾಮನಗರ, ಬಾದಾಮಿ, ಹೊನ್ನಾಳಿ, ರಾಯಚೂರು, ಗಂಗಾವತಿ, ಕನಕಗಿರ್ರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಡಿ ಎಸ್ ಎಸ್ ಮುಖಂಡರಾದ ಡಾ|| ಎನ್ ಮೂರ್ತಿ, ಬಸವರಾಜ್ ಕೌತಾಳ್, ಶ್ರೀಧರ ಕಲಿವೀರ್, ಮಾರಸಂದ್ರ ಮುನಿಯಪ್ಪ, ಅಶೋಕ್ ಸಿದ್ಧಾರ್ಥ್, BSP ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ, ಮಿಥುನ್ ಸಿಂಗ್, ಧಾರವಾಡ ಜಿಲ್ಲಾ ದಲಿತ ಮುಖಂಡರಾದ ಲಕ್ಷ್ಮಣ ಬಕ್ಕಾಯಿ, ಡಿ. ಎಸ್ ಎಸ್ ಮುಖಂಡರಾದ ವೆಂಕಟಗಿರಿ, ಪರಿವರ್ತನಾ ಸಮಿತಿ ಅಧ್ಯಕ್ಷರಾದ ಗೋವಿಂದರಾಜು, ದಲಿತ ಚಿಂತಕ ದೇವರಾಜ್ ಒಡೆಯರ್, ಲಕ್ಷ್ಮಣ್ ಮರಡಿ ತೋಟ ಬಾದಾಮಿ, ಸೇರಿದಂತೆ ಅನೇಕ ದಲಿತ ಮುಖಂಡರು, ಹೋರಾಟಗಾರರು, ಭಾಗವಹಿಸಿದ್ದರು.

ರಾಜ್ಯ ಸರ್ಕಾರಕ್ಕೆ ಸ್ವಾಭಿಮಾನಿ ಎಸ್ ಸಿ ಎಸ್ ಟಿ ಸಂಘಟನೆಗಳ ಒಕ್ಕೂಟ ಹಾಗೂ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯು ಸೆಪ್ಟಂಬರ್ 28 ರ ಒಳಗಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಒತ್ತಾಯ ಮಾಡಿದ್ದು, ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದ್ದರಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಬೇಕೆಂದು ಸೂಚನೆ ನೀಡಿದ್ದು ಆ ಮೂಲಕ ಅಕ್ಟೋಬರ್ 9 ರಂದು ನಡೆಯುವ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಳ್ಳದೆ ಅಂದು ಗುರುಗಳ ಕಡೆಗೆ ನಮ್ಮ ನಡಿಗೆ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಬೇಡರ ಕಣ್ಣಪ್ಪ ಟ್ರಸ್ಟ್ ಅಧ್ಯಕ್ಷರಾದ ಎಲ್ ಮುನಿಸ್ವಾಮಪ್ಪ, ನಿವೃತ್ತ ಜಿಲ್ಲಾಧಿಕಾರಿಗಳಾದ ಡಿ ಶಿವಪ್ಪ, ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರಾದ ಕೆ ಎಸ್ ಮೃತ್ಯುಂಜಯಪ್ಪ, ನಿವೃತ್ತ ಜೈಲ್ ಸುಪರಿಡೆಂಟ್ ಹರ್ತಿಕೋಟೆ ವೀರೇಂದ್ರ ಸಿಂಹ, ನಿವೃತ್ತ ನ್ಯಾಯಾದೀಶರಾದ ಮಲ್ಲೇಶಪ್ಪ, ನಿವೃತ್ತ ಅಧಿಕಾರಿಗಳು ಬಿಬಿಎಂಪಿ ಮಾಜಿ ಸದಸ್ಯರಾದ ನರಸಿಂಹ ನಾಯಕ, ಪ್ರಭುಸ್ವಾಮಿ, ವೆಂಕಟೇಶ್ ಬಾಬು, ಅಜ್ಜಂಪುರ ಕೃಷ್ಣಪ್ಪ, ಹಾಯ್ ಬೆಂಗಳೂರು ಶ್ರೀನಿವಾಸ್, ನವರತ್ನ ಅಗ್ರಹಾರ ಶ್ರೀನಿವಾಸ್, ಕೆ.ಎಂ ಎಫ್ ಶಂಕರ್, ನಾರಾಯಣಪ್ಪ, ಬೆಳ್ಳಿ ಗಂಗಾಧರ್, ದೇವರಾಜ್ ಕುಪ್ಪೂರು, ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದ ಬಂಧುಗಳು ಉಪಸ್ಥಿತರಿದ್ದರು
ಮಹರ್ಷಿ ವಾಲ್ಮೀಕಿ ಸಂಘ ದೊಡ್ಡಬಳ್ಳಾಪುರ, ಹೊನ್ನಾಳಿ ತಾಲ್ಲೂಕು ನಾಯಕ ಸಂಘ, ರಾಯಚೂರು ಡಿ ಎಸ್ ಎಸ್ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


