ಕೆ.ಆರ್ ಪೇಟೆ ಮಂಡ್ಯ : ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡ ಪ್ರೇಮಿಗಳು.

ಮನನೊಂದ ಪುತ್ರಿಯ ತಂದೆ ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು…
ರವಿಯ ಶವವಿಟ್ಟುಕೊಂಡು ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು…
ತಾಲ್ಲೂಕಿನ ಬೂಕನಕೆರೆ ಹೋಬಳಿ ಬಿ.ಬಾಚಹಳ್ಳಿ ಗ್ರಾಮದ ಮುಖಂಡ ಪ್ರಗತಿಪರ ರೈತರಾದ ರವಿ ಅವರ ಪುತ್ರಿಯಾದ ಕೀರ್ತನ(21) ಮತ್ತು ಅಭಿ(28)ಮನೆ ಬಿಟ್ಟು ಹೋಗಿರುವ ಅಮರ ಪ್ರೇಮಿಗಳಾಗಿದ್ದಾರೆ ….
ಬಿ.ಬಾಚಹಳ್ಳಿ ಗ್ರಾಮದಲ್ಲಿ ನಡೆದಿರುವ ಹೃದಯ ವಿಧ್ರಾವಕ ಘಟನೆ..
ಕಾಲೇಜು ವ್ಯಾಸಂಗ ಮಾಡುತ್ತಿರುವ
ಮಗಳು ಪ್ರೇಮಿಯ ಜೊತೆ ಓಡಿ ಹೋಗಿದ್ದಕ್ಕೆ ಬೇಸತ್ತ ತಂದೆ ರವಿ(47) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು…
ಮನೆಯ ಗೌರವ ಕಳೆದು ತಂದೆ-ತಾಯಿಗಳಿಗೆ ಮೋಸ ಮಾಡಿ ಹೋಗಿರುವ ಮಗಳನ್ನು ಬಂಧಿಸಿ ತರುವಂತೆ ಒತ್ತಾಯಿಸಿ ಬಿ.ಬಾಚಹಳ್ಳಿ ಗ್ರಾಮಸ್ಥರಿಂದ ಮೃತ ರವಿ ಅವರ ಶವವಿಟ್ಟುಕೊಂಡು ಗ್ರಾಮಾಂತರ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು..
ಕಳೆದ ಐದು ದಿನಗಳ ಹಿಂದೆಯೇ ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಬೇಜವಾಬ್ಧಾರಿತನ ಪ್ರದರ್ಶಿಸಿ ಕೈಚೆಲ್ಲಿ ಕುಳಿತಿರುವ ಪೋಲಿಸರ ಬೇಜವಾಬ್ಧಾರಿತನ ಖಂಡಿಸಿ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿ.ಬಾಚಹಳ್ಳಿ ಗ್ರಾಮಸ್ಥರು..
ಪೋಲಿಸ್ ಠಾಣೆಯ ಮುಂದೆ ಉದ್ರಿಕ್ತ ವಾತಾವರಣ ನಿರ್ಮಾಣ..
ಶೀಘ್ರವೇ ಮನೆ ಬಿಟ್ಟು ಓಡಿ ಹೋಗಿರುವ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ ಪೋಲಿಸ್ ಇನ್ಸ್ ಪೆಕ್ಟರ್ ಕೆ.ಎಸ್.ನಿರಂಜನ ಅವರ ಆಶ್ವಾಸನೆಯ ಮೇರೆಗೆ ಪ್ರತಿಭಟನೆ ಕೈಬಿಟ್ಟು ಊರಿಗೆ ತೆರಳಿದ ಗ್ರಾಮಸ್ಥರು..ಮುಗಿಲು ಮುಟ್ಟಿರುವ ಮೃತ ರವಿಯ ಬಂಧುಗಳ ಆಕ್ರಂಧನ..
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



