ಮೈಸೂರು : ಸಂಘ ಸಂಸ್ಥೆಗಳು ಬೆಳೆಯಬೇಕಾದರೆ ಸದಸ್ಯರ ಪಾತ್ರ ಮುಖ್ಯವಾಗಿರುತ್ತದೆ.

ವೃತ್ತಿಪರ ಜೊತೆಗೆ ಮಾನವೀಯತೆ ಬಹುಮುಖ್ಯ
ಯಾವುದೇ ಸಂಘ ಸಂಸ್ಥೆಗಳು
ನಷ್ಟದಿಂದ ಲಾಭದ ಕಡೆಗೆ ಮುಖ ಮಾಡಬೇಕಾದರೆ ಆ ಸಂಸ್ಥೆಯ ಸದಸ್ಯರ ಪಾತ್ರ ಮುಖ್ಯವಾಗಿರುತ್ತದೆ ಎಂದು
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಹೋಟೆಲ್ ಮಾಲಿಕ ಪತ್ತಿನ ಸಹಕಾರ ಸಂಘ ದ ನಿರ್ದೇಶಕರಾದ ಸಿ ನಾರಾಯಣಗೌಡ ಹೇಳಿದರು
ಮೈಸೂರು ನಗರದ ಬಿ ಎನ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ 2021-2022 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ವೃತ್ತಿಪರತೆ ಜೊತೆಗೆ
ಮಾನವೀಯತೆ ಬಹುಮುಖ್ಯ,
ಎಷ್ಟೇ ವ್ಯವಹಾರ ಮಾಡುತ್ತಿದ್ದರೂ ಮಾನವೀಯ ಮೌಲ್ಯಗಳನ್ನು ಮಾತ್ರ ಮರೆಯಬಾರದು. ಅದೇ ರೀತಿ ಸಹಕಾರ ಸಂಘಗಳು ಕೂಡ ಸಮಾಜಮುಖಿ ಚಿಂತನೆ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸದಸ್ಯರು ಸಂಘದ ಎಲ್ಲಾ ವ್ಯವಹಾರವನ್ನು ಮುಚ್ಚುಮರೆಯಿಲ್ಲದೇ ಮುಕ್ತವಾಗಿ ತಿಳಿದುಕೊಂಡು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ತಂತ್ರಿ ಮಾತನಾಡಿ
ಮಾನವನ ಸರ್ವಾಂಗೀಣ ಬೆಳವಣಿಗೆ ಹಾಗೂ ಆರ್ಥಿಕ ಸುಭದ್ರತೆಗೆ ಸಹಕಾರ ಸಂಘಗಳು ಹೆಚ್ಚು ಸಹಕಾರಿಯಾಗಿವೆ’
ಮನುಷ್ಯ ಸಂಘ ಜೀವಿ ಹಾಗೂ ಸಮಾಜ ಜೀವಿ. ಸೌಹಾರ್ದದಿಂದ ಕೂಡಿದ ಸಂಬಂಧಗಳೇ ಆತನಿಗೆ ಜೀವನಾಡಿಯಾಗಿವೆ. ಪರಸ್ಪರರು ನಂಬಿಕೆ, ವಿಶ್ವಾಸಗಳಿಂದ ವ್ಯವಹಾರ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ತಮ್ಮ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳುವ ಜೊತೆಗೆ ಸಂಘದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹೋಟೆಲ್ ಮಾಲಿಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಆರ್ ತಂತ್ರಿ ,ಉಪಾಧ್ಯಕ್ಷರಾದ
ಪಿ ನಾರಾಯಣ್ ಕುಂದರ್,
ನಿರ್ದೇಶಕರುಗಳಾದ ಸಿ ನಾರಾಯಣಗೌಡ ,ಬಿ ಸಿದ್ದರಾಜು ,ಎಂ ಎಸ್ ಜಯಪ್ರಕಾಶ್, ಸುಮಿತ್ರಾ ಎ ತಂತ್ರಿ ,ವಿ ಎಸ್ ರವಿ ಶಾಸ್ತ್ರಿ ,
ಎಂ ಆರ್ ಪುರಾಣಿಕ್, ಹೇಮಂತಕುಮಾರ್, ಸುಲೋಚನಾ ಚಂದ್ರಶೇಖರ್ ಶೆಟ್ಟಿ ,ನಾರಾಯಣ್ ವಿ ಹೆಗ್ಡೆ ,
ಕೆ ಸಿ ವಿಶ್ವಾನಂದ ಭಟ್ ,
ಆನಂದ್ ಎಂ ಶೆಟ್ಟಿ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

