ಮೈಸೂರು: ವ್ಯಾಪಾರಸ್ಥರು ಮತ್ತು ಗ್ರಾಹಕರು ಆರೋಗ್ಯವಂತ ಮೈಸೂರು ನಿರ್ಮಾಣದ ಕಡೆ ಕೈಜೋಡಿಸಬೇಕೆಂದು ಡಾ ನಾಗರಾಜ ಕರೆ ನೀಡಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ಮಂಡಿ ಮೊಹಲ್ಲಾದ ಚಿಕ್ಕ ಮಾರ್ಕೆಟ್ ಹಾಗೂ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧದ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಬಗ್ಗೆ ಕರಪತ್ರ ಹಾಗೂ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು
ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ವಿಶ್ವವಿಖ್ಯಾತವಾಗಿದೆ ಕೋಟ್ಯಾಂತರ ಮಂದಿ ದೇಶವಿದೇಶದಿಂದ ಬರುತ್ತಾರೆ ಇಂದಿಗೂ ಪಾರಂಪರಿಕತೆ ಹಸಿರು ಹೆಚ್ಚಿರುವ ಮೈಸೂರು ದೇಶದ ಸ್ವಚ್ಛನಗರಿಯಾಗಿ ಬಿರುದು ಪಡೆದಿರುವುದು ಹೆಮ್ಮೆಯ ವಿಚಾರ,ಆದರೆ ಇಂದು ಪ್ಲಾಸ್ಟಿಕ್ ಬಳಕೆ ರಸ್ತೆಬದಿಯಿಂದ ಶಾಪಿಂಗ್ ಮಾಲ್ ವರೆಗೂ ಅವಲಂಬಿತವಾಗಿದೆ ಅದರಿಂದ ಮಾರಣಾಂತಿಕ ಕಾಯಿಲೆ ಬರುತ್ತದೆ ಮತ್ತು ಪ್ಲಾಸ್ಟಿಕ್ ವ್ಯಾಜ್ಯವಾಗಿ ಕರಗಲು 500ವರುಷಗಳು ಬೇಕು ಇದು ಪರಿಸರ ನೀತಿಯ ವಿರುದ್ಧ ಅಸಮತೋಲನವಾಗಿದೆ, ನಗರಪಾಲಿಕೆಯೂ ಸಹ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದಿದ್ದೇವೆ, ಆದರೆ ಅದು ಜನಾಂದೋಲನದಿಂದ ಮಾತ್ರ ಸಾಧ್ಯ ಹಾಗಾಗಿ ಸ್ವಚ್ಛನಗರಿ ಮೈಸೂರನ್ನು ಪಾರಂಪರಿಕ ನಗರವಾಗಿ ಉಳಿಸಿಕೊಳ್ಳಬೇಕಾದರೆ ಪ್ಲಾಸ್ಟಿಕ್ ಬಳಕೆಯನ್ನು ಜನಸಾಮಾನ್ಯರು ನಿಷೇಧಿಸಬೇಕು, ಮತ್ತು ಈಬಾರಿ ದಸರಾ ಆಚರಣೆಯನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂದು ಎಲ್ಲರೂ ಸಂಕಲ್ಪ ತೊಡೋಣ , ವ್ಯಾಪಾರಸ್ಥರು ಮತ್ತು ಗ್ರಾಹಕರು ಆರೋಗ್ಯವಂತ ಮೈಸೂರು ನಿರ್ಮಾಣದ ಕಡೆ ಕೈಜೋಡಿಸಬೇಕೆಂದು ಕರೆ ನೀಡಿದರು, ಮೈಸೂರಿನಲ್ಲಿ ಪಾರಂಪರಿಕೆ ಕೆರೆಗಳು, ಉದ್ಯಾನವನಗು ದೊಡ್ಡಮರಗಳು ಕಾಣುತ್ತವೆ ಎಂದರೆ ಮೈಸೂರು ರಾಜರ ಕೊಡುಗೆ, ಪ್ಲಾಸ್ಟಿಕ್ ಬಳಕೆ ಮೇಲೆ ನಾವು ಅವಂಲಂಬಿತರಾದರೆ ಖಾಯಿಲೆಯನ್ನು ಉಚಿತವಾಗಿ ಪಡೆದಂತೆ ಹಾಗಾಗಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮಾರಾಟ ನಿಲ್ಲಿಸಬೇಕು,
ಗ್ರಾಹಕರು ಮನೆಯಿಂದ ಬಟ್ಟೆ ಬ್ಯಾಗ್ ತಂದು ವ್ಯಾಪರಸ್ಥರಿಗೂ ಸಹಕರಿಸಬೇಕೆಂದರು ಮನವಿ ಮಾಡಿದರು
ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್ ಮಾತನಾಡಿ “ಮೈಸೂರು ದಸರಾಗೆ ಸಜ್ಜಾಗುತ್ತಿದೆ, ಅದ್ದೂರಿ ಆಚರಣೆಯ ಘೋಷಣೆಯಾಗಿ ಹೆಚ್ಚು ಪ್ರವಾಸಿಗರ ಸೆಳೆಯುವ ನಿರೀಕ್ಷೆ ಇದೆ. ಪಾಲಿಕೆಯ ಪೌರ ಕಾರ್ಮಿಕರು ಸ್ವಚ್ಚತೆ ಕಾಪಾಡಲು ಹಗಲಿರುಳು ಪಾಳಿಗೆ ತಯಾರಾಗುತ್ತಿದ್ದಾರೆ. ಆದರೆ ಕೆಲ ಜನ ಬೇಜವಾಬ್ದಾರಿಯಿಂದ ಏಕಬಳಕೆ ಪ್ಲಾಸ್ಟಿಕ್ ಉಪಯೋಗಿಸುವುದನ್ನು ಮುಂದುವರೆಸುವುದರ ಜೊತೆಗೆ ವರ್ತುಲ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡಿ ನಗರದ ಅಂದಗೆಡಿಸುವುದರ ಜೊತೆ ಪ್ರಕೃತಿಗೆ ವಿಷವಿಕ್ಕುತ್ತಿದ್ದಾರೆ. ಜನ ಸಾಮಾಜಿಕ ಹೊಣೆಗಾರಿಕೆ ಅರಿತು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಮತ್ತು ಇರುವ ಪ್ಲಾಸ್ಟಿಕ್ಕನ್ನು ಸರಿಯಾಗಿ ವಿನಿಯೋಗ ಮಾಡಬೇಕು ಮತ್ತು ಮರುಬಳಕೆಯಾಗುವ ಹಾಗೂ ಮರು-ಉತ್ಪಾದಿಸಲು ಸಾಧ್ಯವಿರುವ ವಸ್ತುಗಳನ್ನೇ ಬಳಸಬೇಕು” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ಮಹಾ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ,ಮಂಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ವಿಶ್ವನಾಥ್ ,ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ರವಿಶಂಕರ್ ,ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸುಚೀಂದ್ರ ,ಸದಾಶಿವ , ಸ್ಥಳೀಯ ಆರೋಗ್ಯ ನಿರೀಕ್ಷಕರು ಬಸವರಾಜು ,ಸುಬ್ರಹ್ಮಣ್ಯ ,ಕೇಬಲ್ ವಿಜಿ ,ಕಿರಣ್ ,ಚಂದ್ರ ,ರಾಜು ,ಹಾಗೂ ಇನ್ನಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

