“168 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಶುಭಾಶಯಗಳು”: ಸಿಸಿಲ್‌ ಸೋಮನ್

168 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಶುಭಾಶಯಗಳು.

ನಾರಾಯಣ ಗುರು ಹುಟ್ಟಿದ್ದು ಸರ್ವಧರ್ಮದ,ಬಹು ಸಂಸ್ಕೃತಿಯ ನೆಲೆಯಾದ “ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದ ಚೆಂಬಿಳಂತಿ” ಎಂಬ ಗ್ರಾಮದಲ್ಲಿ. ಇಂದಿಗೆ 164 ವರ್ಷ ಗಳ ಹಿಂದೆ ಅಂದರೆ 1854ನೇ ಇಸವಿ ಶ್ರಾವಣ ಮಾಸದ ಶತಭಿಷ ನಕ್ಷತ್ರದಲ್ಲಿ ಓಣಂ ಹಬ್ಬದ ಮೂರನೆ ದಿನದಂದು “ತಂದೆ ಮಾದನ್‌ ಆಶಾನ್‌ , ತಾಯಿ ಕುಟ್ಟಿ ಅಮ್ಮಾಳ್‌” .ಈಳವ ಜಾತಿಗೆ ಸೇರಿದ ಕುಟುಂಬ.

ನಾಣುವಿಗೆ ದೂರದ ಕರುನಾಗಪಳ್ಳಿ ಚೆರುವನ್ನಾರ್‌ ಮನೆತನದ ಶ್ರೀ ರಾಮನ್‌ ಆಶಾನ್‌ ಎಂಬ ಗುರುಗಳಲ್ಲಿ ಶಿಕ್ಷಣ ದೊರೆಯಿತು. ಹಲವಾರು ವಿದ್ಯೆಯನ್ನು ಸಿದ್ಧಿಸಿ ʼನಾಣು ಚಟ್ಟಾಂಬಿʼ ಆಗಿ ಆಧ್ಯಾತ್ಮ ಗುರುವಾದರು.

ಅವರು ಹೇಳಿದ “ಒಂದೇ ಜಾತಿ ,ಇಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಇಂದು ನಾರಾಯಣ ಗುರುಗಳ ಜಾತಿ ನಮಗೆ ಮುಖ್ಯವಲ್ಲ” ,ಅವರ ನೀತಿ ಮುಖ್ಯ. “ಚತುರ್ವರ್ಣ ವ್ಯವಸ್ಥೆಯ ಕರಾಳ ಕತೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ.

ನಾರಾಯಣ ಗುರುರವರು ಸಮಾಧಿಯಾಗುವ ದಿನ ʼ ನನ್ನನ್ನು ಎದ್ದು ಕೂರಿಸಿ ಯೋಗ ವಾಸಿಸ್ಟ ಪಾರಾಯಣ ಮಾಡಿ ಎಂದರಂತೆ. ಪಾರಾಯಣ ಮಾಡಿ “ಮೋಕ್ಷ ಕಾಂಡ”ಕ್ಕೆ ಬರುವಾಗ ಇಹಲೋಕ ತೆಜಿಸಿದರು.

ಈ ಸವಿ ನೆನಪಿನ ಅಂಗವಾಗಿ ಇಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸುತ್ತೆವೆ.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555

Leave a Reply

Your email address will not be published. Required fields are marked *